ಪಾಟ್ನಾ(18-10-2020):ಚುನಾವಣೆಗೆ ಬರೇ ಹತ್ತು ದಿನಗಳು ಬಾಕಿಯಿರುವತೆಯೇ ರಾಷ್ಟ್ರೀಯ ಲೋಕ ಸಮತಾ ಪಕ್ಷ ಇಬ್ಭಾಗವಾದ ಅಚ್ಚರಿದಾಯಕ ಬೆಳವಣಿಗೆ ಉಂಟಾಗಿದೆ. ಪಕ್ಷದ ರಾಷ್ಟ್ರೀಯ ಕಾರ್ರದರ್ಶಿ ಅರುಣ್ ಕುಶ್ವಾಹ ನೇತೃತ್ವದ ಒ0ದು ಗುಂಪು ಪಕ್ಷ ತೊರೆದು ಬಿಜೆಪಿ ಸೇರಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯ ನಾಯಕತ್ವದಲ್ಲಿ ದೇಶವನ್ನು ಮುನ್ನಡೆಸಲು ಸಾಧ್ಯವಿದೆ. ತೃತೀಯ ರಂಗದ ಅಗತ್ಯತೆ ಇಲ್ಲವೆಂದು ಅರುಣ್ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಪಕ್ಷದ ಅಧ್ಯಕ್ಷ ಉಪೇಂದ್ರ ಕುಶ್ವಾಹ ಮು0ದಾಳತ್ವದಲ್ಲಿ ತೃತೀಯ ರಂಗವು ಅಸ್ತಿತ್ವಕ್ಕೆ ಬಂದ ಬೆನ್ನಿಗೆ ಇ0ತಹ ವಿಲಕ್ಷಣ ಬೆಳವಣಿಗೆ ಉಂಟಾಗಿದೆ. ಆರ್ಜೆಡಿಯ ತೇಜಸ್ವಿ ಯಾದವ್ ಜೊತೆಗೆ ಭಿನ್ನಾಭಿಪ್ರಾಯವುಂಟಾಗಿ ಇತ್ತೀಚೆಗಷ್ತೇ ಆರ್ಎಲ್ಯಸ್ಪಿ ಮಹಾಮೈತ್ರಿಯನ್ನು ತೊರೆದಿತ್ತು.