ಪಾಟ್ನಾ(30-12-2020): ಇತ್ತೀಚೆಗೆ ಬಿಹಾರದಲ್ಲಿ ನೂತನವಾಗಿ ರಚನೆಯಾದ ಎನ್ ಡಿಎ ಸರಕಾರ ಪತನವಾಗುವ ಲಕ್ಷಣಗಳು ಕಂಡು ಬರುತ್ತಿದ್ದು, ಜೆಡಿಯು ಶಾಸಕರು RJD ಯೊಂದಿಗೆ ಸಂಪರ್ಕದಲ್ಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಆರ್.ಜೆ.ಡಿ. ಹಿರಿಯ ಮುಖಂಡ ಶ್ಯಾಮ್ ರಾಜಕ್ ಮಾತನಾಡಿ ಜೆಡಿಯು ಶಾಸಕರು ಸಂಪರ್ಕದಲ್ಲಿರುವ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ನಿತೀಶ್ ಕುಮಾರ್ ಓರ್ವ ನಿರಂಕುಶ ಅಧಿಕಾರಿ. ಇದರಿಂದಾಗಿ ಬಹುಪಾಲು ಶಾಸಕರು ನೋವು ಅನುಭವಿಸುತ್ತಿದ್ದು, ನೆಲೆಯನ್ನು ಕಂಡುಕೊಳ್ಳಲು ಮುಂದಾಗಿದ್ದಾರೆ ಎಂದು ಹೇಳಿದ್ದಾರೆ.
ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಎನ್.ಡಿ.ಎ. ಸರ್ಕಾರ ಶೀಘ್ರದಲ್ಲೇ ಪತನವಾಗಲಿದೆ. ಜೆಡಿಯುನ 17 ಶಾಸಕರು ಆರ್.ಜೆ.ಡಿ.ಯೊಂದಿಗೆ ಸಂಪರ್ಕದಲ್ಲಿದ್ದಾರೆ. ನಿತೇಶ್ ಕುಮಾರ್ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಆರ್.ಜೆ.ಡಿ. ಹಿರಿಯ ಮುಖಂಡ ಶ್ಯಾಮ್ ರಾಜಕ್ ಹೇಳಿದ್ದಾರೆ.