ಬಿಹಾರ(17-10-2020): ಬಿಹಾರದ ಸಚಿವ, ಜೆಡಿಯು ಹಿರಿಯ ನಾಯಕ ಕಪಿಲ್ ದೇವ್ ಕಾಮತ್ ಕರೊನಾಗೆ ಬಲಿಯಾಗಿದ್ದಾರೆ. ಶಾಸಕರು, ಸಂಸದರು ಸೇರಿ ಈವರೆಗೆ 20ಮಂದಿ ಜನನಾಯಕರು ಕೊರೊನಾಗೆ ಬಲಿಯಾಗಿದ್ದಾರೆ.
69 ವರ್ಷದವರಾಗಿದ್ದ ಕಾಮತ್, ನಿತೀಶ್ ಕುಮಾರ್ ಸಂಪುಟದಲ್ಲಿ ಪಂಚಾಯತ್ ರಾಜ್ ಇಲಾಖೆಯ ಸಚಿವರಾಗಿದ್ದರು. ಇತ್ತೀಚೆಗೆ ಕಿಡ್ನಿ ಸೋಂಕಿನಿಂದ ಪಾಟ್ನಾದ ಏಮ್ಸ್ಗೆ ದಾಖಲಾಗಿದ್ದ ಕಪಿಲ್ ದೇವ್ ಕಾಮತ್ರಿಗೆ ಕರೊನಾ ಸೋಂಕು ದೃಢಪಟ್ಟಿತ್ತು ಮತ್ತು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಬಿಹಾರ ಎನ್ಡಿಎ ಸರ್ಕಾರದಲ್ಲಿ ಈವರೆಗೆ ಇಬ್ಬರು ಸಚಿವರು ಕೊರೊನಾಗೆ ಬಲಿಯಾಗಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಗುರುಗ್ರಾಮ್ನ ಮೇದಾಂತಾ ಆಸ್ಪತ್ರೆಯಲ್ಲಿ ವಿನೋದ್ ಸಿಂಗ್ ನಿಧನರಾಗಿದ್ದರು.