ಎನ್ ಡಿಎ ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯಿತು: ತೇಜಸ್ವಿ ಯಾದವ್ ಆರೋಪ; ‘ಪೋಸ್ಟಲ್ ಬ್ಯಾಲೆಟ್ ಅನ್ನು ತಿರಸ್ಕರಿಸಿದ್ದು ಯಾಕೆ?’

tejashwi yadav
Share on facebook
Share on twitter
Share on linkedin
Share on whatsapp
Share on telegram
Share on email
Share on print

ಪಾಟ್ನಾ(12/11/2020): ಪೋಸ್ಟಲ್ ಬ್ಯಾಲೆಟ್ ಅನ್ನು ಇನ್ನೊಮ್ಮೆ ಎಣಿಸಬೇಕು ಎಂದು ಆರ್ ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಆಗ್ರಹಿಸಿದ್ದಾರೆ.

ಜನರು ಮಹಾಘಟಬಂಧನ್ ಪರವಾಗಿ ಮತ ಚಲಾಯಿಸಿದ್ದಾರೆ. ಆದರೆ, ಚುನಾವಣಾ ಆಯೋಗ ಎನ್ ಡಿಎ ಪರವಾಗಿತ್ತು ಎಂದು ಅವರು ಆರೋಪಿಸಿದ್ದಾರೆ.

‘ನಮ್ಮ ಪರವಾಗಿ ಮತ ಚಲಾಯಿಸಿದ್ದಕ್ಕೆ ಬಿಹಾರದ ಜನತೆ ಧನ್ಯವಾದಗಳು’ ಎಂದ ತೇಜಸ್ವಿ ಯಾದವ್, ಚುನಾವಣಾ ಆಯೋಗ ಪರವಾಗಿತ್ತು. ಆದ್ದರಿಂದ ನಾವು ಸೋತೆವು ಎಂದು ಹೇಳಿದ್ದಾರೆ.

‘ಇದು ಮೊದಲ ಬಾರಿಯೇನಲ್ಲ. 2015ರಲ್ಲೂ ಬಿಜೆಪಿ ಅಧಿಕಾರ ಪಡೆಯಲು ಹಿಂಬಾಗಿಲ ಮೂಲಕ ಪ್ರಯತ್ನಿಸಿತ್ತು. ಮಹಾ ಘಟಬಂಧನ್ ಗಿಂತ ಎನ್ ಡಿಎ ಕೇವಲ 12, 270 ಮತಗಳಷ್ಟೇ ಲಭಿಸಿತ್ತು’ ಎಂದು ಯಾದವ್ ಹೇಳಿದ್ದಾರೆ.

‘ನಮಗೆ 20 ಸೀಟುಗಳು ನಷ್ಟವಾದವು. ಹಲವು ಕ್ಷೇತ್ರಗಳಲ್ಲಿ 900ರಷ್ಟು ಅಂಚೆ ಬ್ಯಾಲೆಟ್ ಗಳನ್ನು ಅಸಿಂಧುಗೊಳಿಸಲಾಯಿತು. ಅಭ್ಯರ್ಥಿಗಳಿಗೆ ಇದರ ಕಾರಣವನ್ನೂ ತಿಳಿಸಿಲ್ಲ. ನಮಗೆ ಜನರ ಬೆಂಬಲ ದೊರೆಯಿತು. ಆದರೆ, ಹಣ, ವಂಚನೆ ಮೊದಲಾದವಗಳ ಮೂಲಕ ಎನ್ ಡಿಎ ಜಯಗಳಿಸಿತು’ ಎಂದು ಬಿಹಾರದ ಯುವರಾಜಕಾರಣಿ ತೇಜಸ್ವಿ ಯಾದವ್ ಆರೋಪಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು