ಬಿಹಾರ ಚುನಾವಣೆ; ಹಿಲ್ಸಾ ಕ್ಷೇತ್ರದ ಜೆಡಿಯು ಅಭ್ಯರ್ಥಿ ಬಿಹಾರದ ಇತಿಹಾಸದಲ್ಲೇ ಅತ್ಯಂತ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ; ಎಷ್ಟು ಮತಗಳ ಅಂತರದಿಂದ ಅವರು ಜಯಿಸಿದ್ದಾರೆ ಗೊತ್ತೇ?*

Share on facebook
Share on twitter
Share on linkedin
Share on whatsapp
Share on telegram
Share on email
Share on print
ಪಾಟ್ನಾ(11/11/2020): ಬಿಹಾರದ ವಿಧಾನ ಸಭಾ ಚುನಾವಣೆಯ ಅಂತಿಮ ಫಲಿತಾಂಶ ಪ್ರಕಟಗೊಂಡು, ಎನ್ ಡಿಎ ಬಹುಮತ ಪಡೆದಿದ್ದರೂ ಈ ಬಾರಿಯ ಚುನಾವಣಾ ಹಣಾಹಣಿ ತೀವ್ರ ಪೈಪೋಟಿಯಿಂದ ಕೂಡಿತ್ತು.
ಎದುರಾಳಿಗಳು ಕಡಿಮೆ ಅಂತರದಿಂದ ಗೆದ್ದಿರುವುದು ಈ ಚುನಾವಣೆಯ ಇಂದು ವಿಶೇಷ ಎನ್ನಬಹುದು. ಅದರಲ್ಲೂ ಮುಖ್ಯವಾಗಿ ಹಿಲ್ಸಾ ವಿಧಾನ ಸಭಾ ಕ್ಷೇತ್ರದ ಜೆಡಿಯು ಅಭ್ಯರ್ಥಿ ಕೇವಲ 12 ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಇಷ್ಟು ಕಡಿಮೆ ಅಂತರದಲ್ಲಿ‌ ಜಯಿಸಿರುವುದು ಬಿಹಾರದ ಇತಿಹಾಸದಲ್ಲಿ ಇದೇ ಮೊದಲ ಬಾರಿಯಾಗಿದೆ.
ಜೆಡಿಯು ಅಭ್ಯರ್ಥಿ ಕೃಷ್ಣ ಮುರಾರಿ 61,848 ಮತಗಳನ್ನು ಪಡೆದಿದ್ದರೆ, ಅವರ ಎದುರಾಳಿ ಆರ್ ಜೆಡಿಯ ಶಕ್ತಿ ಸಿಂಗ್ ಎಂಬವರು 61, 836 ಪಡೆಗಳನ್ನು ಪಡೆದು, ಕೇವಲ 12 ಮತಗಳ ಅಂತರದಲ್ಲಿ ಪರಾಭವಗೊಂಡಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು