ಬಿಹಾರ ಚುನಾವಣೆ; ಅವಸರದಲ್ಲಿ ಫಲಿತಾಂಶ ಪ್ರಕಟಿಸದಂತೆ ಸಿಬ್ಬಂದಿಗಳಿಗೆ ಚುನಾವಣಾ ಆಯೋಗ ಸೂಚನೆ

electon
Share on facebook
Share on twitter
Share on linkedin
Share on whatsapp
Share on telegram
Share on email
Share on print

ಪಾಟ್ನಾ(10/11/2020); ಬಿಹಾರ ವಿಧಾನ ಸಭಾ ಚುನಾವಣೆಯ  ಫಲಿತಾಂಶ ತಡರಾತ್ರಿಯ ಹೊತ್ತಿಗೆ ಪ್ರಕಟಗೊಳ್ಳಲಿದ್ದು, ಅಲ್ಲಿಯವರೆಗೆ ಫಲಿತಾಂಶ ಪ್ರಕಟಿಸುವ ಅವಸರ ತೋರಬಾರದೆಂದು ಸಿಬ್ಬಂದಿಗಳಿಗೆ ಮುಖ್ಯ ಚುನಾವಣಾಧಿಕಾರಿ ಎಚ್ಚರಿಕೆ ನೀಡಿದ್ದಾರೆ. ಕೋವಿಡ್ ನಿರ್ದೇಶನಗಳನ್ನು ಪಾಲಿಸಿರುವುದರಿಂದ  ಮತ ಎಣಿಕೆಯಲ್ಲಿ ವಿಳಂಬವಾಗುತ್ತಿದೆ ಎಂದಿದ್ದಾರೆ.

ಅವಸರದಲ್ಲಿ ಚುನಾವಣಾ ಫಲಿತಾಂಶವನ್ನು ಪ್ರಕಟಿಸಬಾರದು. ಪೂರ್ಣವಾಗಿ ಮತ ಎಣಿಕೆ ಮುಗಿದ ಮೇಲೆಯೇ ಪ್ರಕಟಿಸಬೇಕು ಎಂದು ಚುನಾವಣಾ ಆಯೋಗ ಸಿಬ್ಬಂದಿಗಳಿಗೆ ಸೂಚಿಸಿದೆ.

ರಾತ್ರಿ ಹತ್ತು ಗಂಟೆಗೆ ಚುನಾವಣಾ ಆಯೋಗ ಪುನಃ ಪತ್ರಿಕಾಗೋಷ್ಠಿ ನಡೆಸಲಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು