ಬಿಹಾರದಲ್ಲಿ ಮೊದಲ ಹಂತದ ಮತದಾನ ಪ್ರಾರಂಭ: ಧಿಬ್ರಾದಲ್ಲಿ ಸ್ಪೋಟಕ ಪತ್ತೆ, ಮತಯಂತ್ರಗಳಲ್ಲಿ ಸಮಸ್ಯೆ

Bihar Assembly Election
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬಿಹಾರ(28-10-2020): ಬಿಗಿ ಭದ್ರತೆ ಮತ್ತು ಕೋವಿಡ್-19 ಮಾರ್ಗಸೂಚಿಗಳ ಮಧ್ಯೆ ಬಿಹಾರ ವಿಧಾನಸಭೆಗೆ ಮೊದಲ ಹಂತದ ಮತದಾನ ನಡೆಯುತ್ತಿದೆ. 71 ವಿಧಾನಸಭಾ ಕ್ಷೇತ್ರಗಳಲ್ಲಿ ರಾಜ್ಯದ 2.14 ಕೋಟಿಗೂ ಹೆಚ್ಚು ಮತದಾರರು ಮೊದಲ ಹಂತದ ವಿಧಾನಸಭಾ ಚುನಾವಣೆಯಲ್ಲಿ 1,066 ಅಭ್ಯರ್ಥಿಗಳ ಭವಿಷ್ಯವನ್ನು ಮತಪೆಟ್ಟಿಗೆಯಲ್ಲಿ ಭದ್ರಗೊಳಿಸುತ್ತಿದ್ದಾರೆ.

 ಔರಂಗಾಬಾದ್‌ನ ಧಿಬ್ರಾ ಪ್ರದೇಶದಿಂದ ಸುಧಾರಿತ ಸ್ಫೋಟಕ ಸಾಧನಗಳನ್ನು ಇಂದು ಕೇಂದ್ರ ಮೀಸಲು ಪೊಲೀಸ್ ಪಡೆ ವಶಪಡಿಸಿಕೊಂಡಿದೆ ಮತ್ತು ನಿಷ್ಕ್ರಿಯಗೊಳಿಸಿದೆ. ಲಖಿಸರೈನ ಮತಗಟ್ಟೆ 168 ರಲ್ಲಿ ಎಲೆಕ್ಟ್ರಾನಿಕ್ ಮತದಾನ ಯಂತ್ರದಲ್ಲಿ ಸಮಸ್ಯೆ ಪತ್ತೆಯಾಗಿದೆ.

ಮಾಸ್ಕ್ ಅಥವಾ ಟವೆಲ್ ಗಳಿಂದ ಮುಖವನ್ನು ಮುಚ್ಚಿ ಮತದಾರರು ಮತದಾನಕ್ಕೆ ಹೋಗಬೇಕಾಗುತ್ತದೆ. ಅವರ ದೇಹದ ಉಷ್ಣತೆಯನ್ನು ಪರಿಶೀಲಿಸಲಾಗುತ್ತದೆ, ಅವರ ಕೈಗಳನ್ನು ಸ್ವಚ್ಛಗೊಳಿಸಲಾಗುತ್ತದೆ ನಂತರ ಅವರಿಗೆ ಮತ ಚಲಾಯಿಸಲು ಅವಕಾಶವಿರುತ್ತದೆ.

ಬಿಹಾರದಲ್ಲಿ 243 ವಿಧಾನಸಭಾ ಸ್ಥಾನಗಳಿಗೆ ಮೂರು ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ಮತ ಎಣಿಕೆ ನವೆಂಬರ್ 10 ರಂದು ನಡೆಯಲಿದೆ.ಮತಗಟ್ಟೆಯ ಸುತ್ತ ಬಿಗಿಭದ್ರತೆಗೆ ವ್ಯವಸ್ಥೆ ಮಾಡಲಾಗಿದ್ದು, ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು