ಅಮೆರಿಕಾ(06-02-2021): ಕೊಲಂಬಿಯಾ ಕೋರ್ಟ್ ಸಹಾಯಕ ನ್ಯಾಯಾಧೀಶರಾಗಿ ಭಾರತೀಯ-ಅಮೆರಿಕನ್ ವಕೀಲ ವಿಜಯ್ ಶಂಕರ್ ಅವರ ನಾಮನಿರ್ದೇಶನವನ್ನು ಯುಎಸ್ ಅಧ್ಯಕ್ಷ ಜೋ ಬಿಡನ್ ಹಿಂತೆಗೆದುಕೊಂಡಿದ್ದಾರೆ.
ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತ ಎರಡು ತಿಂಗಳ ನಂತರ ಮತ್ತು ಜನವರಿ 20 ರಂದು ಅಮೆರಿಕದ 46 ನೇ ಅಧ್ಯಕ್ಷರಾಗಿ ಬಿಡೆನ್ ಪ್ರಮಾಣವಚನ ಸ್ವೀಕರಿಸುವ ಹದಿನೈದು ದಿನಗಳ ಮೊದಲು ಶಂಕರ್ ಅವರನ್ನು ಈ ಉನ್ನತ ನ್ಯಾಯಾಂಗ ಸ್ಥಾನಕ್ಕೆ ನಾಮಕರಣ ಮಾಡಲಾಗಿತ್ತು.
ಇದೀಗ ವಾಪಸಾತಿ ಅಧಿಸೂಚನೆಯನ್ನು 30 ಕ್ಕೂ ಹೆಚ್ಚು ಹೆಸರುಗಳೊಂದಿಗೆ ಸೆನೆಟ್ಗೆ ಕಳುಹಿಸಲಾಗಿದೆ. ಹೆಚ್ಚಾಗಿ ನ್ಯಾಯಾಂಗ ನೇಮಕಾತಿಗಳನ್ನು ಟ್ರಂಪ್ ಆಡಳಿತದ ಕೊನೆಯ ತಿಂಗಳುಗಳಲ್ಲಿ ಘೋಷಿಸಲಾಗಿತ್ತು.