ಮುಂಬೈ : ಕಳೆದ ಮೂರು ದಿನಗಳಿಂದ ಕುಸಿತಕ್ಕೊಳಗಾಗಿದ್ದ ಭಾರತೀಯ ಷೇರುಪೇಟೆ ವಹಿವಾಟು ಇದೀಗ ನಾಲ್ಕನೇ ದಿನಕ್ಕೂ ಭಾರೀ ಕುಸಿತದ ಹೆಜ್ಜೆ ಇಟ್ಟಿದೆ.
ಮುಂಬೈ ಷೇರುಪೇಟೆ ಸೆನ್ಸೆಕ್ಸ್ 562.34 ಪಾಯಿಂಟ್ಸ್ ಕುಸಿತಗೊಂಡು 49,801.62 ಪಾಯಿಂಟ್ಸ್ ಗೆ ತಲುಪಿದೆ.ರಾಷ್ಟ್ರೀಯ ಷೇರುಪೇಟೆ ನಿಫ್ಟಿ 189.20 ಪಾಯಿಂಟ್ಸ್ ಇಳಿಕೆಗೊಂಡು 14,721.30 ಪಾಯಿಂಟ್ಸ್ ಗೆ ತಲುಪಿದೆ.
ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್ನ ಸಭೆ ಹಾಗೂ ಜಾಗತಿಕ ಮಾರುಕಟ್ಟೆಗಳಲ್ಲಿನ ಇಳಿಮುಖ ವಹಿವಾಟಿನಿಂದಾಗಿ ಸೂಚ್ಯಂಕಗಳು ಇಳಿಕೆ ಕಂಡವು ಎಂದು ತಜ್ಞರು ಹೇಳಿದ್ದಾರೆ.