ಪಾಶ್ಚಾತ್ಯ ದೇಶಗಳು, ಅರಬ್-ಮುಸ್ಲಿಂ ದೇಶಗಳು ಮತ್ತು ನೆರೆಹೊರೆಯ ದೇಶಗಳ ಬಳಿಕ ಇದೀಗ ನ್ಯೂಜಿಲ್ಯಾಂಡ್ | ಕೋವಿಡ್ ನಿಂದ ನಲುಗಿದ ಭಾರತಕ್ಕೆ ನೆರವಿನ ಹಸ್ತ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ:  ಕೋವಿಡ್ ಮಹಾಮಾರಿಯ ರುದ್ರ ನರ್ತನ ಮತ್ತು ದೇಶದ ನಾಯಕರ ಘೋರ ನಿರ್ಲಕ್ಷ್ಯದಿಂದಾಗಿ ನಲುಗಿರುವ ಭಾರತಕ್ಕೆ ನೆರವಿನ ಹಸ್ತ ಚಾಚಿತು ನ್ಯೂಜಿಲ್ಯಾಂಡ್. ಪಾಶ್ಚಾತ್ಯ ದೇಶಗಳು, ಅರಬ್ಮುಸ್ಲಿಂ ದೇಶಗಳು ಮತ್ತು ನೆರೆಹೊರೆಯ ದೇಶಗಳ ಬಳಿಕ ಇದೀಗ ನ್ಯೂಜಿಲೆಂಡ್ ಕೂಡಾ ಸಂಕಷ್ಟದ ಸಮಯದಲ್ಲಿ ಭಾರತಕ್ಕೆ ನೆರವಿನ ಹಸ್ತ ಚಾಚಿದೆ.

ಭಾರತಕ್ಕೆ ಒಂದು ಮಿಲಿಯನ್ ನ್ಯೂಜಿಲೆಂಡ್ ಡಾಲರ್ ನೆರವು ನೀಡುವುದಾಗಿ ನ್ಯೂಝಿಲ್ಯಾಂಡ್ ಪ್ರಧಾನ ಮಂತ್ರಿ ಜಸಿಂದಾ ಅರ್ದರ್ನ್ ಘೋಷಿಸಿದ್ದಾರೆ.

ಭಾರತದ ಸಂಕಷ್ಟದ ಸಮಯದಲ್ಲಿ ನಾವು ಭಾರತದ ಜೊತೆ ನಿಲ್ಲುವೆವು. ಕೋವಿಡ್ ವಿರುದ್ಧದ ಹೋರಾಟದಲ್ಲಿ ಧೈರ್ಯವಾಗಿ ಮುನ್ನುಗ್ಗುತ್ತಿರುವ ಅಲ್ಲಿನ ವೈದ್ಯರಿಗೆ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಅಭಿನಂದನೆಗಳನ್ನು ಹೇಳುತ್ತೇವೆ ಎಂದು ವಿದೇಶಾಂಗ ಸಚಿವ ನಾನಯ್ಯ ಮಹುತಾ ಹೇಳಿದ್ದಾರೆ.

ನ್ಯೂಝಿಲ್ಯಾಂಡ್ ತಾನು ನೀಡಲಿರುವ ಧನ ಸಹಾಯವನ್ನು ಭಾರತದ ರೆಡ್‍ಕ್ರಾಸ್ ಸಂಸ್ಥೆಗೆ ನೀಡಲಿದೆ. ಆಕ್ಸಿಜನ್ ಮತ್ತಿತರ ತುರ್ತು ಅಗತ್ಯಗಳಿಗಾಗಿ ಇದನ್ನು ವ್ಯಯಿಸಬೇಕೆಂದು ಪ್ರಧಾನಿ ಜಸಿಂದಾ ಸೂಚಿಸಿದ್ದಾರೆ.

ಭಾರತದ ಸ್ಥಿತಿಗತಿಗಳನ್ನು ನಾವು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಮುಂದೆಯೂ ಸಾಂದರ್ಭಿಕವಾಗಿ ಸಹಾಯಸಹಕಾರಗಳನ್ನು ನೀಡುವುದನ್ನು ಮುಂದುವರಿಸಲಿದ್ದೇವೆ ಎಂದು ವಿದೇಶಾಂಗ ಸಚಿವ ಹೇಳಿದ್ದಾರೆ. ಜೊತೆಗೆ ಸಾಂಕ್ರಾಮಿಕದಿಂದ ಮಡಿದವರ ಕುಟುಂಬಸ್ಥರ ದುಃಖದಲ್ಲಿ ಭಾಗಿಯಾಗುತ್ತೇವೆ ಎಂದಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು