ಭಾರತಕ್ಕೆ ಲಸಿಕೆ ಬೇಕು, ನಿಮ್ಮ ಕಣ್ಣೀರಲ್ಲ: ಪ್ರಧಾನಿ ಮೋದಿ ವಿರುದ್ಧ ಮನಮೋಹನ್ ಸಿಂಗ್ ಕಿಡಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ : ಭಾರತಕ್ಕೆ ಲಸಿಕೆ ಬೇಕು,
ನಿಮ್ಮ ಕಣ್ಣೀರಲ್ಲ. ದೇಶಕ್ಕಾಗಿ ಏನಾದರೂ ಮಾಡಿ. ಇಲ್ಲದಿದ್ದರೆ ತಕ್ಷಣ ರಾಜೀನಾಮೆ ನೀಡಿ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಿಡಿ ಕಾರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿದ ಅವರು ಪ್ರಧಾನಿ ಕೊರೊನಾ ನಿರ್ವಹಣೆಯಲ್ಲಿ ನರೇಂದ್ರ ಮೋದಿ ದೇಶದ ನಾಯಕರಾಗಿ ವಿಫಲರಾಗಿದ್ದಾರೆ. ದೇಶದಲ್ಲಿ ಕೊರೊನಾ ಅಬ್ಬರ ಮುಂದುವರೆದಿದೆ. ಪ್ರತಿ ನಿತ್ಯ ದೇಶದಲ್ಲಿ ಸಾವಿರಾರು ಮಂದಿ ಮೃತಪಡುತ್ತಿದ್ದಾರೆ. ಆದರೂ ಪ್ರಧಾನಿಗಳು ಯಾವುದೇ ಕ್ರಮಕೈಗೊಳ್ಳದೇ ಕಣ್ಣೀರು ಹಾಕುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಕೊರೊನಾ ಜಗತ್ತಿನ ಎಲ್ಲಾ ದೇಶಗಳನ್ನು ಭಾಧಿಸಿದೆ.
ಕೆನಡಾದ ಪ್ರಧಾನಿ, ಅಮೆರಿಕ ಅಧ್ಯಕ್ಷ, ಇಟಲಿ ಮತ್ತು ಯುಕೆ ಪ್ರಧಾನಿ ಸೇರಿದಂತೆ ಅನೇಕ ನಾಯಕರು ಕಣ್ಣೀರು ಹಾಕಲಿಲ್ಲ. ಆದರೆ ಪ್ರಧಾನಿ ಮೋದಿ ಯಾಕೆ ಕಣ್ಣೀರಿಟ್ಟಿದ್ದಾರೆ? ಅವರ ನಾಯಕತ್ವ ವಿಫಲವಾಗಿದೆ, ದೇಶಕ್ಕೆ ಬೇಕಾಗಿರುವುದು ಲಸಿಕೆ ಹೊರತು ನಿಮ್ಮ ಕಣ್ಣೀರಲ್ಲ, ದೇಶಕ್ಕಾಗಿ ಏನಾದರೂ ಮಾಡಿ ಇಲ್ಲದಿದ್ದರೆ ತಕ್ಷಣ ರಾಜಿನಾಮೆ ನೀಡಿ ಎಂದು ಮನಮೋಹನ್ ಸಿಂಗ್ ಪ್ರಧಾನಿ ಮೋದಿ ವಿರುದ್ಧ ಗುಡುಗಿದ್ದಾರೆ.

ಈ ದೇಶದ ಜನತೆಗಾಗಿ ಮೋದಿಯವರು ಏನಾದರೂ ಒಂದು ಉತ್ತಮ ಕೆಲಸ ಮಾಡಿದ್ದಾರೆಯೇ? ಈ ಸರ್ಕಾರದ ಕೆಲಸ ಎಂದರೆ ಜನತೆಗೆ ಸಂಕಷ್ಟಕ್ಕೆ ಸಿಲುಕಿಸುವುದು, ಸಾಲುಗಟ್ಟಿ ನಿಲ್ಲಿಸುವುದು. ಅದೇ ನೋಟ್ ಬದಲಾವಣೆ, ಜಿ ಎಸ್ ಟಿ, ಈಗ ಲಾಕ್ ಡೌನ್ ನಲ್ಲಿ ಸಾಲು ಸಾಲು ನಿಲ್ಲುವುದು. ದೇಶದ ಜನರಿಗೆ ಏನು ಹಂಚಿಕೆ ಮಾಡಲಿಲ್ಲ, ಬದಲಾಗಿ ಹಿಂದೂ, ಮುಸ್ಲಿಂ,‌ ಸಿಖ್, ಇಸಾಯಿ ಎಂದು ಒಡೆದು ಆಳುವ ನೀತಿ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು