ಭಾರತದ ಸ್ಥಿತಿಯು ಕರಣಾಜನಕ ಮತ್ತು ಅದಕ್ಕಿಂತಲೂ ಘೋರ ಎಂದ ವಿಶ್ವ ಆರೋಗ್ಯ ಸಂಸ್ಥೆ | ಭಾರತಕ್ಕೆ ಧನ ಸಹಾಯ ಮಾಡಲು ‘ಗೋ ವಿ ವನ್’ ಅಭಿಯಾನ ಆರಂಭ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಜಿನೇವಾ: ಲಸಿಕೆ ನೀಡಿಕೆಗಾಗಿ ಧನ ಸಂಗ್ರಹ ಮಾಡುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆಯುಗೋ ವಿ ವನ್ಎಂಬ ಧನ ಸಂಗ್ರಹ ಅಭಿಯಾನ ಆರಂಭಿಸಿದೆ.

ಭಾರತದ ಕೋವಿಡ್ ಪರಿಸ್ಥಿತಿ ಕರಣಾಜನಕವಾಗಿದೆ ಅಥವಾ ಅದಕ್ಕಿಂತಲೂ ಘೋರವಾಗಿದೆ. ಹಲವು ರಾಜ್ಯಗಳಲ್ಲಿ ಸಾಂಕ್ರಾಮಿಕ ರೋಗವು ಬಹಳ ತೀವ್ರವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧನೋಮ್ ಗೆಬ್ರಿಯೆಸುಸ್ ಹೇಳಿದ್ದಾರೆ.

ಆಕ್ಸಿಜನ್ ಕೊರತೆ ಮತ್ತಿತರ ಪ್ರಾಥಮಿಕ ವೈದ್ಯಕೀಯ ಸಲಕರಣೆಗಳಿಗೂ ತೀವ್ರ ಕೊರತೆ ಕಂಡು ಬಂದಿದೆ. ನಮ್ಮಿಂದ ಸಾಧ್ಯವಿರುವುದನ್ನೆಲ್ಲಾ ನಾವು ಮಾಡಲಿದ್ದೇವೆ.

ವಿಶ್ವ ಆರೋಗ್ಯ ಸಂಸ್ಥೆಯು ಈಗಾಗಲೇ ಎರಡು ಸಾವಿರಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರನ್ನು ಭಾರತಕ್ಕೆ ಕಳುಹಿಸಿದೆ. ಹೆಚ್ಚುವರಿ ಆರೋಗ್ಯ ಸಿಬ್ಬಂದಿಗಳನ್ನೂ ಮತ್ತು ಆಕ್ಸಿಜನಿನಂತಹ ವೈದ್ಯಕೀಯ ಸಲಕರಣೆಗಳನ್ನೂ ನೀಡಲಿದೆ ಎಂದು ಅವರು ತಿಳಿಸಿದರು.

ಕೋವಿಡ್ ಸಾಂಕ್ರಾಮಿಕ ರೋಗವು ಎಷ್ಟರಮಟ್ಟಿಗೆ ದುರಂತಮಯವಾಗಬಹುದು ಎಂಬುದಕ್ಕೆ ಭಾರತದ ಈಗಿನ ಪರಿಸ್ಥಿತಿಯೇ ಉದಾಹರಣೆಯಾಗಿದೆ ಎಂದು ಶುಕ್ರವಾರದಂದು ಕೋವಿಡ್ ಕುರಿತ ವರ್ಚುವಲ್ ಸಭೆಯೊಂದರಲ್ಲಿ ಕೂಡಾ ಟೆಡ್ರೋಸ್ ಹೇಳಿದ್ದರು.

ಭಾರತದ ಕೋವಿಡ್ ಸ್ಥಿತಿಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಗಂಭೀರವಾಗಿ ಪರಿಗಣಿಸಿದೆ. ಜೊತೆಗೆ ಹೆಚ್ಚುತ್ತಿರುವ ಸಾವಿನ ದರವೂ ಕಳವಳಕಾರಿಯಾಗಿದೆಯೆಂದು ಇದೇ ಸಂದರ್ಭದಲ್ಲಿ ಟೆಡ್ರೋಸ್ ಹೇಳಿದ್ದರು.

ವಿಶ್ವ ಆರೋಗ್ಯ ಸಂಸ್ಥೆಯ ಹೊರತಾಗಿ, ಅಮೇರಿಕಾ, ಬ್ರಿಟನ್, ಪಾಕಿಸ್ತಾನ, ಚೀನಾ, ಹಲವು ಕೊಲ್ಲಿ ದೇಶಗಳು, ಫ್ರಾನ್ಸ್, ಟರ್ಕಿ ಮುಂತಾದ ಹಲವು ದೇಶಗಳು ಭಾರತದತ್ತ ನೆರವಿನ ಹಸ್ತ ಚಾಚಿದೆ.

ಸೇನೆಯ ಸಹಭಾಗಿತ್ವ

ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಪ್ರಧಾನಮಂತ್ರಿ ನರೇಂದ್ರ ಮೋದಿ ಜೊತೆಗಿನ ಮಾತುಕತೆಯ ವೇಳೆಯಲ್ಲಿ ಸೇನೆಗಾಗಿ ಮೀಸಲಿರಿಸಿದ ಆಮ್ಲಜನಕವನ್ನು ಆಸ್ಪತ್ರೆಗಳಿಗೆ ಕಳುಹಿಸಲಾಗುವುದು ಎಂದು ಹೇಳಿದ್ದಾರೆ. ಜೊತೆಗೆ ಸೇನೆಯಿಂದ ನಿವೃತ್ತಿಗೊಂಡಿರುವ ಆರೋಗ್ಯ ಸಿಬ್ಬಂದಿಗಳನ್ನೂ ವೈದ್ಯಕೀಯ ಸಲಕರಣೆಗಳ ಜೊತೆಗೆ ಕಳುಹಿಸಲಾಗುವುದು ಎಂದಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು