ಭಾರತದ ಹೆಮ್ಮೆಯ ಪ್ರವಾಸಿ ತಾಣ ತಾಜ್ ಮಹಲ್ ಗೆ ಬಾಂಬ್ ಬೆದರಿಕೆ ಕರೆ

thajmahal
Share on facebook
Share on twitter
Share on linkedin
Share on whatsapp
Share on telegram
Share on email
Share on print

ಆಗ್ರಾ: ಭಾರತದ ಹೆಮ್ಮೆಯ ಪ್ರವಾಸಿ ತಾಣ  ತಾಜ್ ಮಹಲ್ ನಲ್ಲಿ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಕರೆಯೊಂದು ಬಂದಿದ್ದು, ಈ ಹಿನ್ನೆಲೆಯಲ್ಲಿ  ತಾಜ್ ಮಹಲ್ ನ್ನು ಮುಚ್ಚಿಸಿ ಪ್ರವಾಸಿಗರನ್ನು ತೆರವುಗೊಳಿಸಲಾಗಿದೆ.

ತಾಜ್ ಮಹಲ್ ನಲ್ಲಿ ಬಾಂಬ್ ಇಡಲಾಗಿದೆ ಎಂಬ ಅನಾಮಿಕ ಕರೆಯೊಂದು ಬಂದಿದ್ದು, ಇದರಿಂದಾಗಿ ಅಧಿಕಾರಿಗಳು ತಾಜ್ ಮಹಲ್ ಸುತ್ತ ತಪಾಸಣೆ ನಡೆಸುತ್ತಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನೂ ಕೈಗೊಂಡಿದ್ದಾರೆ.

ಕೊರೊನಾ ವೈರಸ್ ಸಂಕಷ್ಟದ ಹಿನ್ನೆಲೆಯಲ್ಲಿ 6 ತಿಂಗಳ ಕಾಲ ತಾಜ್ ಮಹಲ್ ಗೆ ಪ್ರವಾಸಿಗರ ಆಗಮನಕ್ಕೆ ನಿರ್ಬಂಧ ಹಾಕಲಾಗಿತ್ತು.  ಕಳೆದ ಸೆಪ್ಟಂಬರ್ ನಲ್ಲಿ ಕೇಂದ್ರ ಸರ್ಕಾರದ ಮಾರ್ಗ ಸೂಚಿ ಪಾಲಿಸಿ ತಾಜ್ ಮಹಲ್ ತೆರೆಯಲಾಗಿತ್ತು. ಆದರೆ ತಾಜ್ ಮಹಲ್ ತೆರೆಯುತ್ತಿದ್ದಂತೆಯೇ ಬಾಂಬ್ ಕರೆ ಬಂದಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು