ನವದೆಹಲಿ(20-12-2020): ಭಾರತದಲ್ಲಿ ಜನವರಿ ತಿಂಗಳಲ್ಲೇ ಬಹು ನಿರೀಕ್ಷಿತ ಕೋವಿಡ್ ಲಸಿಕೆ ವಿತರಣೆ ಆರಂಭಿಸುವ ಸಾಧ್ಯತೆಯಿದೆಯೆಂದು ಕೇಂದ್ರ ಸರಕಾರ ಹೇಳಿದೆ.
ಜನರ ಆರೋಗ್ಯಕ್ಕೆ ಪ್ರಥಮ ಆದ್ಯತೆ ನೀಡಲಾಗುವುದು ಎಂದೂ ಕೇಂದ್ರ ಆರೋಗ್ಯ ಸಚಿವರು ಹೇಳಿದ್ದಾರೆ.
ಕೋವಿಡ್ ವ್ಯಾಕ್ಸಿನನ್ನು ಮೊದಲ ಹಂತದ ಪ್ರಯೋಗಕ್ಕೆ ಒಳಪಡಿಸಿದಾಗ ಅದು ಸುರಕ್ಷಿತವೆಂದು ಕಂಡು ಬಂದಿದೆ. ವ್ಯಾಕ್ಸಿನ ರೋಗ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಭಾರತ್ ಬಯೋಟೆಕ್ ತಿಳಿಸಿದೆ.
ಪರೀಕ್ಷೆಗೊಳಪಡಿಸಿದಾಗ ಕೋವಿಡ್ ವ್ಯಾಕ್ಸಿನಿನಿಂದ ದೊಡ್ಡ ಮಟ್ಟದ ಅಡ್ಡ ಪರಿಣಾಮಗಳೇನೂ ಕಂಡು ಬಂದಿಲ್ಲವೆಂದು ವಾದಿಸಿದ ಭಾರತ್ ಬಯೋಟೆಕ್, ತುರ್ತು ಸಂದರ್ಭಗಳಲ್ಲಿ ಉಪಯೋಗಿಸಲು ತಜ್ಞರ ಸಮಿತಿಯ ಅಂಗೀಕಾರಕ್ಕಾಗಿ ಕಾಯುತ್ತಿದೆ.