ಕೋವಿಡಿನಿಂದಾಗಿ ಉಸಿರುಗಟ್ಟುತ್ತಿರುವ ಭಾರತವನ್ನು ಅಪ್ಪಿ ಹಿಡಿಯುತ್ತಿರುವ ಅರಬ್ ದೇಶಗಳು | ಇದೀಗ ಕುವೈತಿನಿಂದಲೂ ಪ್ರಾಣವಾಯುವಿನೊಂದಿಗೆ ಧಾವಿಸಿ ಬರುತ್ತಿದೆ ಭಾರತೀಯ ಯುದ್ಧ ನೌಕೆಗಳು

Share on facebook
Share on twitter
Share on linkedin
Share on whatsapp
Share on telegram
Share on email
Share on print

ಕುವೈತ್ ಸಿಟಿ: ಉಳಿದೆಲ್ಲಾ ಅರಬ್ ದೇಶಗಳಂತೆ ಕುವೈತ್ ಕೂಡಾ ಭಾರತಕ್ಕೆ ಪ್ರಾಣವಾಯುವನ್ನು ಕಳುಹಿಸುತ್ತಿದೆ. ಭಾರತೀಯ ಯುದ್ಧ ನೌಕೆಗಳಾದ ಐಎನ್ಎಸ್ ತಾಬರ್ ಮತ್ತು ಐಎನ್ಎಸ್ ಕೊಚ್ಚಿ ಮೊದಲಾದವುಗಳಲ್ಲಿ ಆಕ್ಸಿಜನನ್ನು ಕಳುಹಿಸಿಕೊಟ್ಟಿದೆ.


ಕುವೈತಿನ
ರೆಡ್ ಕ್ರೆಸೆಂಟ್ ಸೊಸೈಟಿ ಎಂಬ ಸಂಸ್ಥೆಯ ನೇತೃತ್ವದಲ್ಲಿ ನೆರವು ಕಾರ್ಯಾಚರಣೆ ನಡೆದಿದೆ.

ಐಎನ್ಎಸ್ ತಾಬರಿನಲ್ಲಿ 40 ಮೆಟ್ರಿಕ್ ಟನ್ ವೈದ್ಯಕೀಯ ಬಳಕೆಯ ದ್ರವ್ಯ ರೂಪದ ಆಕ್ಸಿಜನ್ ಮತ್ತು 600 ಆಕ್ಸಿಜನ್ ಸಿಲಿಂಡರುಗಳನ್ನು ಹೊತ್ತು ತಂದರೆ, ಐಎನ್ಎಸ್ ಕೊಚ್ಚಿಯು 60 ಮೆಟ್ರಿಕ್ ಟನ್ ದ್ರವ ರೂಪದ ಆಕ್ಸಿಜನ್, 800 ಆಕ್ಸಿಜನ್ಸಿಲಿಂಡರುಗಳು ಮತ್ತು ಎರಡು ಆಕ್ಸಿಜನ್ ಕಾನ್ಸಂಟ್ರೇಟುಗಳನ್ನು  ಹೊತ್ತುಕೊಂಡು ಬರುತ್ತಿದೆ.

ಕೋವಿಡ್ ಸಮಯದಲ್ಲಿ ಕುವೈತ್ ಮಾಡುವ ಸಹಾಯ ಇದು ಮೊದಲನೆಯ ಬಾರಿಯೇನೂ ಅಲ್ಲ. ಮೇ ನಾಲ್ಕರಂದು ಕುವೈತ್ ಯುದ್ಧ ವಿಮಾನವು 40 ಟನ್ ವೈದ್ಯಕೀಯ ಸಲಕರಣಗಳನ್ನು ದೆಹಲಿಗೆ ತಲುಪಿಸಿತ್ತು. ಅದರಲ್ಲಿ 282 ಆಕ್ಸಿಜನ್ಸಿಲಿಂಡರುಗಳು, 60 ಆಕ್ಸಿಜನ್ ಕಾನ್ಸಂಟ್ರೇಟುಗಳು, ವೆಂಟಿಲೇಟರುಗಳು ಮತ್ತು ವಿವಿಧ ವೈದ್ಯಕೀಯ ಉಪಕರಣಗಳನ್ನು ಹೊಂದಿದ್ದವು.

ಬಳಿಕ ಮೇ ಐದರಂದು ಎಮ್ ವಿ ಕ್ಯಾಪ್ಟ್ ಕಟ್ಟಲ್ ಮನ್ ಎಂಬ ವಾಣಿಜ್ಯ ನೌಕೆಯು 75 ಮೆಟ್ರಿಕ್ ಟನ್ ಆಕ್ಸಿಜನ್ ಹಾಗೂ1000 ಆಕ್ಸಿಜನ್ ಸಿಲಿಂಡರಗಳನ್ನು ಕುವೈತಿನ ಅಲ್ಶುಐಬ್ ಬಂದರಿನಿಂದ ಹೊತ್ತು ಪ್ರಯಾಣ ಬೆಳೆಸಿತ್ತು. ಅದೇ ದಿನ ಐಎನ್ಎಸ್ ಕೊಲ್ಕತ್ತಾ ಎಂಬ ಭಾರತೀಯ ಯುದ್ಧ ನೌಕೆಯು 40 ಟನ್ ದ್ರವ ರೂಪದ ಆಕ್ಸಿಜನ್, 200 ಆಕ್ಸಿಜನ್ ಸಿಲಿಂಡರುಗಳು, ಆಕ್ಸಿಜನ್ ಕಾನ್ಸಂಟ್ರೇಟುಗಳು, ಐಎಸ್ಒ ಕ್ರೆಜನಿಕ್ ಟ್ಯಾಂಕುಗಳು, ಮತ್ತಿತರ ತುರ್ತು ವೈದ್ಯಕೀಯ ಸಾಮಾಗ್ರಿಗಳನ್ನು ಹೊತ್ತುಕೊಂಡು ಕುವೈತಿನ ಬಂದರಿನಿಂದ ಹೊರಟಿದ್ದವು.

ಈ ಎಲ್ಲಾ ನೌಕೆಗಳು ಮೇ ಒಂಭತ್ತು, ಹತ್ತು ಮತ್ತು ಹನ್ನೊಂದನೇ ತಾರೀಕುಗಳಂದು ಭಾರತದ ವಿವಿಧ ಬಂದರುಗಳನ್ನು ಮುಟ್ಟಲಿದೆ.

ಕೋವಿಡ್ ಎರಡನೇ ಅಲೆಯಿಂದಾಗಿ ಸಂದಿಗ್ಧ ಪರಿಸ್ಥತಿಯಲ್ಲಿರುವ ಭಾರತಕ್ಕೆ ಪ್ರಾಥಮಿಕ ವೈದ್ಯಕೀಯ ಸವಲತ್ತುಗಳ ನೆರವಿನ ಮಹಾಪೂರವು ವಿಶ್ವದ ಹಲವು ಕಡೆಗಳಿಂದ ಹರಿದು ಬರುತ್ತಿದೆ. ಇದರಲ್ಲಿ ಅರಬ್ ದೇಶಗಳು ಮತ್ತು ಪಾಶ್ಚಾತ್ಯದೇಶಗಳು ಮುಂಚೂಣಿಯಲ್ಲಿದ್ದು, ನೆರೆಹೊರೆಯ ದೇಶಗಳು, ವಿವಿಧ ಸೆಲೆಬ್ರಟಿಗಳಿಂದಲೂ ಸಹಾಯಸಹಕಾರಗಳು ಬಂದಿವೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು