“ಭಾರತದಲ್ಲಿದ್ದೀರಾ? ತಕ್ಷಣ ವಾಪಸ್ಸಾಗಿ..” ತನ್ನ ಪ್ರಜೆಗಳಿಗೆ ಕರೆ ನೀಡಿದ ಅಮೇರಿಕಾ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ಭಾರತದಲ್ಲಿರುವ ಕೋವಿಡ್ ಸಾಂಕ್ರಾಮಿಕ ರೋಗವು ತನ್ನ ವಿರಾಟ್ ದರ್ಶನವನ್ನು ಪ್ರದರ್ಶಿಸುತ್ತಿರುವಂತೆಯೇ ಹಲವು ದೇಶಗಳು ಭಾರತಕ್ಕಿರುವ ವಿಮಾನಯಾನ ಸೇವೆಗಳನ್ನು ರದ್ದು ಗೊಳಿಸಿವೆ. ಇನ್ನು ಕೆಲವು ದೇಶಗಳು ಭಾರತದಿಂದ ಬರುವ ಪ್ರಯಾಣಿಕರಿಗೆ ಕ್ವಾರಂಟೈನ್ ಕಾಲಾವಧಿಯನ್ನು ಹೆಚ್ಚಿಸಿದೆ. ಗಡಿಗಳನ್ನು ಹಂಚಿಕೊಂಡಿರುವ ದೇಶಗಳು ತಮ್ಮ ಗಡಿಗಳನ್ನೂ ಮುಚ್ಚಿದೆ.

ನಡುವೆ ಅಮೇರಿಕಾವು, ನಾಲ್ಕನೇ ಮಟ್ಟದ ಯಾತ್ರಾ ಸಲಹೆಗಳನ್ನು ನೀಡಿದೆ. ಅದರಂತೆ  ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತಕ್ಕೆ ಪ್ರಯಾಣಿಸಬಾರದು ಎಂದಿದೆ. ಜೊತೆಗೆ ಭಾರತದಲ್ಲಿ ನೆಲೆಸಿರುವ ತನ್ನ ಪ್ರಜೆಗಳಿಗೆ ಆದಷ್ಟು ಬೇಗ ವಾಪಸ್ಸಾಗುವಂತೆ ಕರೆ ನೀಡಿದೆ.

ಅಮೇರಿಕಾದದೂತವಾಸ ವ್ಯವಹಾರ ಕಛೇರಿಗಳ ಇಲಾಖೆಯು ಪ್ರಕಟಣೆಯನ್ನು ಹೊರಡಿಸಿದೆ. ನಾಲ್ಕನೇ ಮಟ್ಟದ ಯಾತ್ರಾ ಸಲಹೆ ಎಂದರೆ ಅಮೇರಿಕಾದಿಂದ ಹೊರಡಿಸಲಾಗುವ ಅತ್ಯಂತ ಗರಿಷ್ಠ ಮಟ್ಟದ ಯಾತ್ರಾ ಸಲಹೆಯೆಂದು ಪರಿಗಣಿಸಲಾಗಿದೆ. ಕೋವಿಡ್ ಕಾರಣದಿಂದಾಗಿ ಭಾರತದಲ್ಲಿ  ವೈದ್ಯಕೀಯ ಸೌಲಭ್ಯಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿವೆ ಎನ್ನುವುದನ್ನೂ ಇಲಾಖೆಯು ಬೊಟ್ಟು ಮಾಡಿದೆ.

ಈಗಾಗಲೇ ಬ್ರಿಟನ್ ಸರಕಾರವು ಭಾರತಕ್ಕಿರುವ ಪ್ರಯಾಣವನ್ನು ‘ಕೆಂಪು ಪಟ್ಟಿಗೆ ಸೇರಿಸಿದೆ. ಆಸ್ಟ್ರೇಲಿಯಾ ಕೂಡ ಭಾರತಕ್ಕೆ ಹೋಗದಂತೆ ತನ್ನ ಪ್ರಜೆಗಳಿಗೆ ನಿರ್ಬಂಧ ವಿಧಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು