ಭಾಲ್ಕಿಯ 247 ಆಶಾ ಕಾರ್ಯಕರ್ತೆಯರಿಗೆ ತಲಾ ₹ 2 ಸಾವಿರ ಪ್ರೋತ್ಸಾಹ ಧನ : ಶಾಸಕ ಈಶ್ವರ ಖಂಡ್ರೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೀದರ್ (ಭಾಲ್ಕಿ): ಜೀವದ ಹಂಗು ತೊರೆದು ತಳಮಟ್ಟದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವ ಭಾಲ್ಕಿ ಕ್ಷೇತ್ರದ 247 ಆಶಾ ಕಾರ್ಯಕರ್ತರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಈಶ್ವರ ಖಂಡ್ರೆ ಅವರು ತಲಾ 2 ಸಾವಿರ ವೈಯಕ್ತಿಕ ಪ್ರೋತ್ಸಾಹ ಧನ ನೀಡಿದ್ದಾರೆ.

2020ನೇ ಸಾಲಿನಲ್ಲಿ ದೇಶಕ್ಕೆ ಕಾಲಿಟ್ಟ ಕೊರೊನಾ ರೋಗದ ವಿರುದ್ಧ ಪ್ರತಿದಿನ ಮನೆ ಮನೆಗೆ ತೆರಳಿ ಕೋವಿಡ್ ಬಗ್ಗೆ ಜಾಗೃತಿ ಮೂಡಿಸಿ, ರೋಗ ಲಕ್ಷಣ ಇರುವವರನ್ನು ಪರೀಕ್ಷಿಸಿ, ಅವರಿಗೆ ಸೂಕ್ತ ಚಿಕಿತ್ಸೆ ಪಡೆಯಲು ಮನವೊಲಿಸಿ ಜನರ ಪ್ರಾಣ ಉಳಿಸುವಲ್ಲಿ ಮತ್ತು ಸಾಂಕ್ರಾಮಿಕ ಸೋಂಕು ಜನ ಸಮುದಾಯಕ್ಕೆ ಹರಡದಂತೆ ಬೇರು ಮಟ್ಟದಲ್ಲಿ ಶ್ರಮಿಸಿದ ಆಶಾ ಕಾರ್ಯಕರ್ತೆಯರ ಸೇವೆ ಅಮೂಲ್ಯವಾದ್ದು, ಆದರೆ ಕಳೆದ 3 ತಿಂಗಳಿಂದಲೂ ಅವರಿಗೆ ಸರ್ಕಾರದಿಂದ ಬರಬೇಕಾದ ಗೌರವ ಧನವೂ ಬರುತ್ತಿಲ್ಲ. ಇದರಿಂದ ಆಶಾ ಕಾರ್ಯಕಾರ್ತೆಯರ ಜೀವನ ನಿರ್ವಹಣೆಗೆ ತೊಂದರೆ ಆಗುತ್ತಿದೆ. ಇದಕ್ಕೆ ಸ್ಪಂದಿಸಿದ ಸ್ಥಳೀಯ ಶಾಸಕ ಈಶ್ವರ ಖಂಡ್ರೆ ಕಾರ್ಯ ಕ್ಷೇತ್ರ ಭಾಲ್ಕಿ ತಾಲೂಕಿನ ಆಶಾ ನೌಕರರಿಗೆ ಒಂದು ಬಾರಿ ಅಭಿನಂದನಾ ಧನವನ್ನು ನೀಡುವ ಮೂಲಕ ಆರ್ಥಿಕ ನೆರವು ನೀಡಿದ್ದಾರೆ.

ಸಮುದಾಯ ಆರೋಗ್ಯ ರಕ್ಷಣೆಯಲ್ಲಿ ಆಶಾ ಕಾರ್ಯಕರ್ತರುಗಳ ಪಾತ್ರ ಹಿರಿದಾಗಿದೆ, ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ತಮ್ಮ ಜೀವಕ್ಕೆ ಅಪಾಯ ಇದ್ದರೂ ಲೆಕ್ಕಿಸದೆ ನಿಸ್ವಾರ್ಥವಾಗಿ ಸಾಂಕ್ರಾಮಿಕ ರೋಗದ ವಿರುದ್ಧ ಜನ ಸೇವೆಗೈಯುತ್ತಿರುವ ಆಶಾ ಕಾರ್ಯಕರ್ತರಿಗೆ ವೈಯಕ್ತಿಕವಾಗೌ ಚಿಕ್ಕ ಪ್ರೋತ್ಸಾಹ ನೀಡುತ್ತಿರುವುದಾಗಿ ತಿಳಿಸಿರುವ ಖಂಡ್ರೆ, ಸರ್ಕಾರ ಅವರಿಗೆ ಕೊಡಬೇಕಾಗಿರುವ ಸಂಭಾವನೆಯನ್ನು ತಕ್ಷಣ ಬಿಡುಗಡೆ ಮಾಡಬೇಕು, ಜೊತೆಗೆ ಈ ಸಂಕಷ್ಟದ ಸಮಯದಲ್ಲೂ ಕರ್ತವ್ಯ ನಿರ್ವಹಿಸುತ್ತಿರುವ ಅವರಿಗೆ ಅಗತ್ಯವಾದ ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ ಒದಗಿಸಬೇಕು ಮತ್ತು ಜೊತೆಗೆ ಪ್ರೋತ್ಸಾಹ ಧನವನ್ನೂ ನೀಡಬೇಕು ಎಂದು ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಸಾಂಕೇತಿಕವಾಗಿ ತಾಲೂಕಿನ ಎಲ್ಲಾ ಆಶಾ ಕಾರ್ಯಕರ್ತರಿಗೆ ತಲಾ 2 ಸಾವಿರ ರೂ.ಗಳ ಅಭಿನಂದನಾ ಧನ ಹಸ್ತಾಂತರಿಸಿದ ಈಶ್ವರ ಖಂಡ್ರೆ ಅವರ ಪುತ್ರ ಶ್ರೀ ಸಾಗರ ಈಶ್ವರ ಖಂಡ್ರೆ ಯವರು ಹಳ್ಳಿ ಹಳ್ಳಿಗಳಲ್ಲೂ ಮನೆ ಮನೆಗೆ ತೆರಳಿ ಗರ್ಭಿಣಿಯರ, ಹಾಲುಣಿಸುವ ತಾಯಂದಿರ, ಮಕ್ಕಳ ಆರೋಗ್ಯ ವಿಚಾರಿಸಿ, ಅವರಿಗೆ ಸೂಕ್ತ ಸಲಹೆಗಳನ್ನು ನೀಡುವ, ಕೋವಿಡ್ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ.

ರೋಗಿಗಳಿಗೆ ಔಷಧ ತಲುಪಿಸುತ್ತಿರುವ ಆಶಾ ಕಾರ್ಯಕರ್ತೆಯರ ಪಾತ್ರ ಮಹತ್ವದ್ದಾಗಿದೆ. ಈ ಹಿಂದೆ ಬೀದರ್ ಬ್ರಿಮ್ಸ್ ಆಸ್ಪತ್ರೆಗೆ ಆಕ್ಸಿಜನ್ ಕಿಟ್ ಗಳನ್ನು ವಿತರಿಸಿದ ಈಶ್ವರ ಖಂಡ್ರೆ ಜಿಲ್ಲೆಯ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಹಲವು ರೀತಿಯ ಕಾರ್ಯಗಳನ್ನು ಮಾಡಿದ್ದಾರೆ. ಜೊತೆಗೆ ತಾಲೂಕು ಹಾಗೂ ಜಿಲ್ಲೆಯ ಅಧಿಕಾರಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು ಕೊರೊನಾ ಸೋಂಕು ಪ್ರಕ್ರಿಯೆ ಹಾಗೂ ಅಗತ್ಯ ಕರ್ತವ್ಯಗಳ ಕುರಿತು ಸಮಾಲೋಚನೆ ನಡೆಸುತ್ತಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು