ಬೆಳಗಾವಿಯಲ್ಲಿ ಡಿಕೆಶಿ ವಿರುದ್ಧ ರಮೇಶ್ ಜಾರಕಿಹೊಳಿ ಬೆಂಬಲಿಗರಿಂದ ಪ್ರತಿಭಟನೆ | – ಡಿಕೆಶಿ ಚಲಿಸುತ್ತಿದ್ದ ಕಾರಿನ ಗಾಜು ಪುಡಿ ಮಾಡಿದ ಪ್ರತಿಭಟನಕಾರರು

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಳಗಾವಿ : ಬೆಳಗಾವಿಯಲ್ಲಿ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ರವರ ವಿರುದ್ಧ ರಮೇಶ್ ಜಾರಕಿಹೊಳಿ ಬೆಂಬಲಿಗರು ‘ಗೋ ಬ್ಯಾಕ್ ಡಿಕೆಶಿ’ ಎಂದು ಘೋಷಣೆ ಕೂಗುವ ಮೂಲಕ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ಮಾಡಿದ್ದಾರೆ.

ಇತ್ತೀಚೆಗೆ ಸುದ್ದಿಯಾಗುತ್ತಿರುವ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಮಹಿಳೆಯ ಮನೆಯವರೊಂದಿಗೆ ಕರೆ ಮಾಡಿ ಮಾತನಾಡಿದ ಆಡಿಯೋ ಒಂದರಲ್ಲಿ ಡಿಕೆಶಿ ಅವರ ಹೆಸರು ಉಲ್ಲೇಖವಾಗಿತ್ತು. ಈ ಕಾರಣಕ್ಕಾಗಿ ಸಿಡಿ ಪ್ರಕರಣದ ಹಿಂದೆ ಡಿಕೆಶಿ ಕೈವಾಡವಿದೆಯೆಂದು ಆರೋಪಿಸಿ ಇಂದು ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿಯವರ ಬೆಂಬಲಿಗರಿಂದ ಡಿಕೆಶಿ ವಿರುದ್ಧ ಪ್ರತಿಭಟನೆ ನಡೆದಿದೆ.

ಡಿಕೆಶಿ ಅವರ ಬೆಂಗಾವಲು ವಾಹನದ ಮೇಲೆ ಪ್ರತಿಭಟನಕಾರರು ಚಪ್ಪಲಿ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೂ ಡಿಕೆ ಶಿವಕುಮಾರ್ ಅವರು ಚಲಿಸುತ್ತಿದ್ದ ಕಾರಿನ ಗಾಜನ್ನೂ ಪ್ರತಿಭಟನಕಾರರು ಪುಡಿ ಪುಡಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು