ಬೆಹರ್ ಕೂಚ್ ಮರುಕಳಿಸಲಿದೆ : ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಬೆಹರ್ ಕೂಚ್ ಘಟನೆಯು ಮರುಕಳಿಸಲಿದೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಎಚ್ಚರಿಕೆ ನೀಡಿದ್ದಾರೆ.

ಜನರು ಮತ್ತು ಭದ್ರತಾ ಪಡೆಗಳ ನಡುವೆ ಸಂಘರ್ಷಕ್ಕೆ ಕಾರಣ ಮಮತಾ ಬ್ಯಾನರ್ಜಿ  ಎಂದು ಆರೋಪಿಸಿದ ದಿಲೀಪ್, ಮಮತಾ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಮಮತಾ ಬ್ಯಾನರ್ಜಿ ಚುನಾವಣಾ ಸಮಾವೇಶ ನಡೆಸುವುದನ್ನು ತಡೆ ಹಿಡಿಯಬೇಕಾಗಿದೆ. ಅವರು ಭದ್ರತಾ ಪಡೆಗಳ ವಿರುದ್ಧ ಜನರನ್ನು ಎತ್ತಿಕಟ್ಟುತ್ತಿದ್ದಾರೆ. ಹೀಗಾದರೆ ಮುಂದೆಯೂ ಹಿಂಸಾಚಾರ ನಡೆಯುವ ಸಾಧ್ಯತೆಯಿದೆ ಎಂದರು.

ಅಮಿತ ಷಾ ಕುಮ್ಮಕ್ಕಿನಿಂದ ಕೇಂದ್ರ ಅರೆಸೈನಿಕ ಪಡೆಗಳು ಪಶ್ಚಿಮ ಬಂಗಾಳದಲ್ಲಿ ನರಮೇಧ ನಡೆಸಿದೆ ಎಂದು ಮಮತಾ ಬ್ಯಾನರ್ಜಿ ಇತ್ತೀಚೆಗೆ ಆರೋಪಿಸಿದ್ದರು.

ಪಶ್ಚಿಮ ಬಂಗಾಳದಲ್ಲಿ ನಾಲ್ಕನೇ ಹಂತದ ಚುನಾವಣೆ ವೇಳೆ ಸಿಐಎಸ್‌ಎಫ್ ಪಡೆ ಮತ್ತು ಸಾರ್ವಜನಿಕರ ನಡುವೆ ಸಂಘರ್ಷ ಏರ್ಪಟ್ಟಿದ್ದು, ಸಿಐಎಸ್‌ಎಫ್ ಪಡೆಗಳ ಗುಂಡೆಸೆತಕ್ಕೆ ನಾಲ್ವರು ಮೃತ ಪಟ್ಟಿದ್ದಾರೆ. ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಐಎಸ್‌ಎಫ್ ಪಡೆಯು ಆತ್ಮರಕ್ಷಣೆಗಾಗಿ ಗುಂಡು ಹಾರಿಸಬೇಕಾಗಿ ಬಂತೆಂದು ಸ್ಪಷ್ಠೀಕರಣ ನೀಡಿತ್ತು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು