ಈಜಿಪ್ಟ್ (02-11-2020): ಕೋಟ್ಯಾದೀಶೆಯಾಗಿದ್ದರೂ ಭಿಕ್ಷೆ ಬೇಡುತ್ತಿದ್ದ ಮಹಿಳೆಯನ್ನು ಈಜಿಪ್ಟ್ ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ.
ನಫೀಸಾ (57) ಬಂಧಿತ ಮಹಿಳೆ. ಇವರು ಐದು ಕಟ್ಟಡಗಳ ಮಾಲಕಿ. 1.4 ಕೋಟಿ ರೂ. ಆಸ್ತಿಯ ಒಡತಿ.ಇವರು ಆರೋಗ್ಯವಾಗಿದ್ದಾರೆ. ಆದರೆ ಗಾಲಿ ಕುರ್ಚಿ ಮೇಲೆ ಕುಳಿತುಕೊಂಡು, ಆರೋಗ್ಯ ಸರಿಯಿಲ್ಲ ಎಂದು ಭಿಕ್ಷೆ ಬೇಡುತ್ತಿದ್ದರು.
ಆಕೆ ಚೆನ್ನಾಗಿಯೇ ನಡೆಯುತ್ತಿದ್ದದ್ದನ್ನು ಪ್ರತ್ಯಕ್ಷದರ್ಶಿಗಳು ಕಂಡು ಪೊಲಿಸರಿಗೆ ತಿಳಿಸಿದ್ದಾರೆ.ಬಳಿಕ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಆದರೆ ಆಕೆಯ ಬಳಿ ಕೋಟ್ಯಾಂತರ ಮೌಲ್ಯದ ಆಸ್ತಿ ಇರುವುದು ತನಿಖೆಯ ವೇಳೆ ತಿಳಿದು ಬಂದಿದೆ.