ಮನುಷ್ಯ ಮಾತ್ರವಲ್ಲ, ಪ್ರಾಣಿಗಳೂ ಬೀಫ್ ತಿನ್ನುವಂತಿಲ್ಲ!

beef
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(13-10-2020):  ಮೃಗಾಲಯದಲ್ಲಿರುವ ಪ್ರಾಣಿಗಳಿಗೂ ಬೀಫ್ ಕೊಡಬಾರದೆಂದು ಕೆಲವು ಹಿಂದುತ್ವವಾದಿಗಳು ಪ್ರತಿಭಟಿಸಿರುವುದು ವರದಿಯಾಗಿದೆ. ಮೃಗಾಲಯಕ್ಕೆ ಮಾಂಸ ಸರಬರಾಜು ಮಾಡುವ ವಾಹನವನ್ನು ದಾರಿ ಮಧ್ಯೆ ತಡೆದು ಅವರು ಪ್ರತಿಭಟಿಸಿದ್ದಾರೆ. ಅಸ್ಸಾಮಿನ ಬಿಜೆಪಿ ನಾಯಕ ಸತ್ಯಾನಾಥ್ ಬೋರಕ್ ನಿನ್ನೆ ಅಸ್ಸಾಮಿನಲ್ಲಿ ನಡೆದ ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಪೋಲೀಸರು ಬಂದು ಪ್ರತಿಭಟನಾಕಾರರನ್ನು ತೆರವುಗೊಳಿಸುವ ವರೆಗೂ ಭಿತ್ತಿಪತ್ರಗಳನ್ನು ಹಿಡಿದು, ಘೋಷಣೆಗಳನ್ನು ಕೂಗುತ್ತಾ ರಸ್ತೆ ತಡೆ ನಡೆಸುತ್ತಿದ್ದರು.

ಹಿಂದೂ ಸಮಾಜದಲ್ಲಿ ದನಕ್ಕೆ ವಿಶೇಷ ಗೌರವವಿದೆ. ಆದರೆ ಸರಕಾರವು ಅದನ್ನು ಕಾಡು ಪ್ರಾಣಿಗಳಿಗೆ ಆಹಾರವಾಗಿ ನೀಡುತ್ತಿದೆ. ಬೀಫ್ ಹೊರತಾದ ಬೇರೆ ಯಾವುದಾದರೂ ಮಾಂಸವನ್ನು ನೀಡಬಾರದೇಕೆ? ಎಂದು ಬೋರಕ್ ಪ್ರಶ್ನಿಸಿದರು. ದೊಡ್ಡ ಜಿಂಕೆಗಳು, ಸಾಮಾನ್ಯ ಜಿಂಕೆಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿದೆ. ಅವುಗಳನ್ನೇ ಮೃಗಾಲಯದ ಪ್ರಾಣಿಗಳಿಗೆ ಆಹಾರವಾಗಿ ನೀಡಬಹುದು ಎಂದು ಪ್ರಶ್ನಿಸಿದ್ದಾರೆ.

ಬೀಫಿನಲ್ಲಿ ಹಲವಾರು ಉತ್ತಮ ಪೋಷಕಾಂಶಗಳಿವೆ. ಆದುದರಿಂದಲೇ ಅದನ್ನು ಕಾಡು ಪ್ರಾಣಿಗಳಿಗೆ ಆಹಾರವಾಗಿ ನೀಡಲಾಗುತ್ತಿದೆಯೆಂದು ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರತಿಭಟನಾಕಾರರಿಗೆ ವಿವರಿಸಿದರು. ಮೊದಲು ಎತ್ತಿನ ಮಾಂಸವನ್ನು ಕೊಡಲು ತೀರ್ಮಾನವಾಗಿತ್ತು. ಆದರೆ ಅದು ಅಸ್ಸಾಮಿನಲ್ಲಿ ಸಿಗುವುದು ಕಷ್ಟ. ಹಾಗಾಗಿ ಕೇಂದ್ರ ಸರ್ಕಾರದ ನಿರ್ದೇಶನದಂತೆ ಬೀಫ್ ನೀಡಲಾಗುತ್ತಿದೆಯೆಂದೂ ಅರಣ್ಯಾಧಿಕಾರಿಗಳು ಪ್ರತಿಭಟನಾಕಾರರಿಗೆ ತಿಳಿ ಹೇಳಿದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು