ಬೆಡ್ ಬ್ಲಾಕಿಂಗ್ ದಂಧೆಯಲ್ಲಿ‌ ತೊಡಗಿದವವರನ್ನು ಕೂಡಲೇ ಬಂಧಿಸಬೇಕು: ಡಿ.ಕೆ.ಶಿವಕುಮಾರ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಬಿಜೆಪಿ ಸಂಸದರು, ಶಾಸಕರು ತಮ್ಮ ಕಾರ್ಯಕರ್ತರ ಮೂಲಕ ಬೆದರಿಕೆ ಹಾಕಿಸಿ ಬೆಡ್ ಬ್ಲಾಕ್ ಮಾಡಿಸುತ್ತಿದ್ದಾರೆ. ಈ ಬಗ್ಗೆ ಮಾಧ್ಯಮಗಳೂ ವರದಿ ಮಾಡಿವೆ. ಇಂತಹ ದುರಂತದ ಪರಿಸ್ಥಿತಿಯಲ್ಲಿ ಬೆಡ್ ಬ್ಲಾಕಿಂಗ್ ದಂಧೆಯಲ್ಲಿ‌ ತೊಡಗಿ ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವವರನ್ನು ಕೂಡಲೇ
ಬಂಧಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ‌.ಶಿವಕುಮಾರ್ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಡ್
ಬ್ಲಾಕಿಂಗ್ ದಂಧೆಯಲ್ಲಿ ಬಿಜೆಪಿ ಸಂಸದರು, ಶಾಸಕರು ಭಾಗಿಯಾಗುತ್ತಿದ್ದಾರೆ ಎಂದು ಆರೋಪಿಸಿದರು,
ಬಿಜೆಪಿ ಸಂಸದರು ವೀರಾವೇಷದಿಂದ ಮಾತನಾಡಿ, ವಾರ್ ರೂಂ ನಲ್ಲಿ ಕೆಲಸ ಮಾಡುತ್ತಿದ್ದ 207 ಜನರಲ್ಲಿ ಒಂದು ಕೋಮಿಗೆ ಸೇರಿದ 17 ಜನರ ಪಟ್ಟಿ ಓದಿದ್ದಾರೆ.
ಲೋಕಸಭಾ ಸದಸ್ಯರಾಗಿದ್ದರೂ ಸಂವಿಧಾನದ ಕನಿಷ್ಠ ಪರಿಜ್ಞಾನವಿಲ್ಲ. ಮುಖ್ಯಮಂತ್ರಿ ಅವರು ಇಂತಹ ತಿಳುವಳಿಕೆ ಹೀನರನ್ನ ತಮ್ಮೊಂದಿಗೆ ಇಟ್ಟುಕೊಂಡಿದ್ದಾರೆ ಎಂದು ಗುಡುಗಿದ್ದಾರೆ.

ಬಿಜೆಪಿ ಸಂಸದರೊಬ್ಬರು ಹಿಂದೊಮ್ಮೆ ‘ಮುಸಲ್ಮಾನರು ಪಂಚರ್ ಹಾಕುವವರು’ ಎಂದು ಹೇಳಿದ್ದರು,
ಮತ್ತೊಮ್ಮೆ ಬೆಂಗಳೂರು ಟೆರರಿಸ್ಟ್ ಹಬ್ ಆಗಿದೆ ಎಂದಿದ್ದರು, ಅದರಂತೆ ಈಗ ಮತ್ತೊಮ್ಮೆ ಸಂವಿಧಾನಕ್ಕೆ ವಿರುದ್ಧವಾದ ಮಾತುಗಳನ್ನಾಡುವ ಮೂಲಕ ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸಲು ಪ್ರಚೋದನೆ ನೀಡುತ್ತಿದ್ದಾರೆ ಎಂದು ಡಿಕೆಶಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು