ಬೆಂಗಳೂರು(03/10/2020): ಈ ಬಾರಿಯ ಬಿಇ ಆರ್ಕಿಟೆಕ್ಚರ್ ಪ್ರವೇಶಕ್ಕೆ ಅಗತ್ಯವಾದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ರ್ಯಾಂಕ್ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಡೆಹಿಡಿದಿದೆ.
ನ.30ರಂದು ಸಿಇಟಿ ರ್ಯಾಂಕ್ ಪಟ್ಟಿ ಪ್ರಕಟಗೊಂಡಿತ್ತು.
ರ್ಯಾಂಕ್ ಪಟ್ಟಿಯಲ್ಲಿ ತಪ್ಪಾಗಿದ್ದು, ಮರುಪರಿಶೀಲಿಸಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡಿದ್ದು, ಹೀಗಾಗಿ ಪಟ್ಟಿಯನ್ನು ತಡೆ ಹಿಡಿಯಲಾಗಿದೆ. ಸಂಬಂಧಪಟ್ಟ ಸಂಸ್ಥೆಗಳಿಂದ ಸ್ಪಷ್ಟೀಕರಣ ಪಡೆದ ಬಳಿಕ ರ್ಯಾಂಕ್ ಪಟ್ಟಿಯ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕೆಇಎ ತಿಳಿಸಿದೆ.