ಬೊಮ್ಮಾಯಿ ಇಂದು ದೆಹಲಿಗೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ದೆಹಲಿಗೆ ತೆರಳಿದ್ದಾರೆ. ಸಂಸದರು, ರಾಜ್ಯ ಪ್ರತಿನಿಧಿಸುವ ಕೇಂದ್ರ ಸಚಿವರೊಂದಿಗೆ ದೆಹಲಿಯ ಖಾಸಗೀ ಹೋಟೆಲ್ ನಲ್ಲಿ ಸಭೆ ನಡೆಸಲಿದ್ದಾರೆ.ತಮ್ಮ ಆರ್ ಟಿ ನಗರದ ನಿವಾಸದಿಂದ ಕೆಐಎಬಿಗೆ ತೆರಳಿದಂತ ಸಿಎಂ, ಅಲ್ಲಿಂದ ಇಂದು ದೆಹಲಿಗೆ ತೆರಳಿದ್ದಾರೆ.

ದೆಹಲಿಯಲ್ಲಿ ಸಂಸದರು, ರಾಜ್ಯಸಭಾ ಸದಸ್ಯರೊಂದಿಗೆ ಖಾಸಗೀ ಹೋಟೆಲ್ ನಲ್ಲಿ ಸಭೆ ಕರೆದಿರುವ ಕಾರಣ, ಇಂದು ಮಹತ್ವದ ಸಭೆಯನ್ನು ಕೂಡ ನಡೆಸಲಿದ್ದಾರೆ. ಬಹು ನಿರೀಕ್ಷಿತ ಸಂಪುಟ ವಿಸ್ತರಣೆ ಬಗ್ಗೆಯೂ ಹೈಕಮಾಂಡ್ ನೊಂದಿಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ.
ಸಿಎಂ ದೆಹಲಿಗೆ ತೆರಳಿದ ಬೆನ್ನಲ್ಲೇ ಸಚಿವ ಸ್ಥಾನ ಆಕಾಂಕ್ಷಿಗಳಲ್ಲಿ ನಿರೀಕ್ಷೆ ಮತ್ತೆ ಗರಿಗೆದರಿದೆ. ಸಚಿವ ಸ್ಥಾನ ಆಪೇಕ್ಷೆ ಇರುವವರೂ ದಿಲ್ಲಿಗೆ ಪ್ರಯಾಣ ಬೆಳೆಸಲು ಸಜ್ಜಾಗಿದ್ದಾರೆ. ಆದ್ರೇ ಬಿಜೆಪಿ ವರಿಷ್ಠರು ಪಂಚ ರಾಜ್ಯಗಳ ಚುನಾವಣೆಯ ಬ್ಯುಸಿಯಲ್ಲಿ ಇರೋ ಕಾರಣ, ತಕ್ಷಣಕ್ಕೆ ಸಂಪುಟ ವಿಸ್ತರಣೆ ಅನುಮಾನ ಎಂದು ಹೇಳಲಾಗುತ್ತಿದೆ. ಆ ಬಗ್ಗೆ ಕಾದು ನೋಡಬೇಕಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು