ದಾವಣಗೆರೆ(29-01-2021): ಸಿಎಂ ಯಡಿಯೂರಪ್ಪ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಕಿಡಿಕಾರಿದ್ದು, ಬಿಎಸ್ ವೈ ಮತ್ತು ಪುತ್ರ ವಿಜೆಯೇಂದ್ರ ವಿರುದ್ಧ ವಸೂಲಿ ಮಾಡುವ ಆರೋಪವನ್ನು ಹೊರಿಸಿದ್ದಾರೆ.
ಯಡಿಯೂರಪ್ಪ ಎಲ್ಲಾ ಖಾತೆಗಳನ್ನು ಬಸವರಾಜ ಬೊಮ್ಮಾಯಿಗೆ ಕೊಡಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಧುಸ್ವಾಮಿ ಬಳಿಯಿದ್ದ ಕಾನೂನು ಖಾತೆಯನ್ನು ಬೊಮ್ಮಾಯಿಗೆ ಏಕೆ ಕೊಡಲಾಗಿದೆ ಎಂದು ಪ್ರಶ್ನಿಸಿದ್ದಾರೆ.
ಪಂಚಮಸಾಲಿ ಲಿಂಗಾಯತ ಸಮುದಾಯದ ಪಾದಯಾತ್ರೆ ಬೆಂಗಳೂರು ಸೇರುವ ಮುನ್ನ 2 ಎ ಘೋಷಿಸದಿದ್ದರೆ ನಿಮ್ಮ ಕುರ್ಚಿ ಖಾಲಿಯಾಗುತ್ತದೆ ಎಂದು ಯಡಿಯೂರಪ್ಪಗೆ ಹೇಳಿದ ಬಸನಗೌಡ ಪಾಟೀಲ್ ಯತ್ನಾಳ್ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲ್ಲ ಬದಲಾಗಿ ಯಡಿಯೂರಪ್ಪನನ್ನು ಕುರ್ಚಿಯಿಂದ ಕೆಳಗಿಳಿಸಿ ನಾನೇ ಸಿಎಂ ಆಗುತ್ತೇನೆ ಎಂದು ಹೇಳಿದ್ದಾರೆ.