ನವದೆಹಲಿ(25-11-2020): ಇತ್ತೀಚೆಗೆ ಆರ್ಬಿಐ ನಿರ್ಬಂಧ ವಿಧಿಸಿದ್ದ ಆರ್ಥಿಕ ಸಂಕಷ್ಟದಲ್ಲಿರುವ ಲಕ್ಷ್ಮಿ ವಿಲಾಸ್ ಬ್ಯಾಂಕ್ ನ್ನು, ಸಿಂಗಾಪುರ ಮೂಲದ ಡಿಬಿಎಸ್ ಬ್ಯಾಂಕ್ ಇಂಡಿಯಾದೊಂದಿಗೆ ವಿಲೀನಗೊಳಿಸಲು ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ.
ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಈ ಕುರಿತು ಮಾಹಿತಿಯನ್ನು ನೀಡಿದ್ದು, ಎಲ್ ವಿಬಿ ಬ್ಯಾಂಕ್ ನ್ನು ಡಿಬಿಎಸ್ ಬ್ಯಾಂಕ್ ಇಂಡಿಯಾ ಲಿಮಿಟೆಡ್ ಜತೆ ವಿಲೀನ ಮಾಡಲಾಗುವುದು. ಇದಕ್ಕೆ ಸಂಪುಟದಲ್ಲಿ ಅನುಮತಿ ಪಡೆಯಲಾಗಿದೆ.
ಇದರಿಂದಾಗಿ ಠೇವಣಿದಾರರಿಗೆ ಮತ್ತು ಉದ್ಯೋಗಿಗಳಿಗೆ ಭದ್ರತೆ ಸಿಗಲಿದೆ. 20 ಲಕ್ಷ ಠೇವಣಿದಾರರು ಆತಂಕ ಪಡಬೇಕಿಲ್ಲ ಎಂದು ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಬ್ಯಾಂಕ್ ನ ಎಲ್ಲಾ ಶಾಖೆಗಳು, ಎಟಿಎಂಗಳು 94 ವರ್ಷದಷ್ಟು ಹಳೆಯದಾದ ಎಲ್ವಿಎಸ್ ಬ್ಯಾಂಕ್ನಲ್ಲಿನ ಠೇವಣಿಗಳು ಡಿಬಿಎಸ್ ಇಂಡಿಯಾದ ಜೊತೆಗೆ ವಿಲೀನವಾಗಲಿದೆ ಎಂದು ಹೇಳಲಾಗಿದೆ.