ಬೆಂಗಳೂರು(30-11-2020): ಬೆಂಗಳೂರಿನ ನಿವೃತ್ತ ಆರೋಗ್ಯ ಪರಿವೀಕ್ಷಕ ಡಿ.ಲಿಂಗರಾಜು ಎಂಬವರು 3.8 ಕೋಟಿ ಲಾಟರಿಯನ್ನು ಗೆದ್ದುಕೊಂಡಿದ್ದಾರೆ.
ಅಮೆರಿಕಾದ ಆನ್ಲೈನ್ ಲೊಟ್ಟೋ247 ಲಾಟರಿಯನ್ನು ಡಿ.ಲಿಂಗರಾಜು ಖರೀದಿಸಿದ್ದರು. ಫಲಿತಾಂಶ ಮೊನ್ನೆ ಪ್ರಕಟವಾಗಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿದ ಡಿ.ಲಿಂಗರಾಜು, ನಾನು ಫಲಿತಾಂಶವನ್ನು ತಡವಾಗಿ ನೋಡಿದ್ದೇನೆ. ನನಗೆ ಆಶ್ಚರ್ಯವಾಗಿದೆ. ಮೊದಲು ನಾನು ಇದನ್ನು ನಂಬಲಿಲ್ಲ. ನನಗೆ ಸಂತೋಷವಾಗಿದೆ. ನನಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಅವರಿಗೆ ವಿವಾಹವಾಗಿದೆ. ಅವರಿಗೆ ಮೊದಲು ನಾನು ಸಹಾಯ ಮಾಡುತ್ತಾನೆ.ಬಳಿಕ ಕುಟುಂಬಸ್ಥರಿಗೆ ಸಹಾಯ ಮಾಡುವುದಾಗಿ ಹೇಳಿದ್ದಾರೆ.