ಬೆಂಗಳೂರು (08-11-2020): ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಅಶೋಕ್ ಕುಮಾರ್ ನೇಣಿಗೆ ಶರಣಾಗಿರುವ ಆಘಾತಕಾರಿ ಘಟನೆ ನಡೆದಿದೆ.
ಶಿವಮೊಗ್ಗ ಮೂಲದ ಪ್ರೊ.ಅಶೋಕ್ ಕುಮಾರ್ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಮೈಕೋ ಲೇಔಟ್ ನ ಕೆಎಎಸ್ ಕಾಲೋನಿಯಲ್ಲಿ ವಾಸವಾಗಿದ್ದರು. ನಿನ್ನೆ ರಾತ್ರಿ ಮಲಗಿದ್ದವರು ಬೆಳಿಗ್ಗೆ ನೋಡುವಾಗ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರೊಫೇಸರ್ ಆಗಿ ಕಾರ್ಯನಿರ್ವಹಿಸಿದ್ದ ಪ್ರೊ.ಅಶೋಕ್ ಕುಮಾರ್, ಪತ್ನಿ ಮಕ್ಕಳು ಮತ್ತು ಅಪಾರ ವಿದ್ಯಾರ್ಥಿ ಬಂಧುಗಳನ್ನು ಅಗಲಿದ್ದಾರೆ.