ಬೆಂಗಳೂರು (31-10-2020): ಬೆಂಗಳೂರಿನಲ್ಲಿ ಬೈಕ್ ಸವಾರನಿಗೆ 42,000 ದಂಡ ವಿಧಿಸಿ 2 ಮೀಟರ್ ಉದ್ದದ ಚಲನ್ ಪೊಲೀಸರು ನೀಡಿರುವ ಘಟನೆ ವರದಿಯಾಗಿದೆ.
ಮಡಿವಾಳ ನಿವಾಸಿ ಅರುಣ್ ಕುಮಾರ್ ಗೆ ಬೆಂಗಳೂರು ಪೊಲೀಸರು 2 ಮೀಟರ್ ಉದ್ದದ ಚಲನ್ ನೀಡಿದ್ದಾರೆ. ಈತನ ವಿರುದ್ಧ 77 ಸಂಚಾರಿ ನಿಯಮ ಉಲ್ಲಂಘನೆ ಕೇಸ್ ದಾಖಲಾಗಿದ್ದವು. ಬಿಲ್ ನೋಡಿ ಅರುಣ್ ಕುಮಾರ್ ಅಚ್ಚರಿಗೊಂಡಿದ್ದಾರೆ.
ಅರುಣ್ ಕುಮಾರ್ 20,000 ರೂ.ನೀಡಿ ಬೇರೊಬ್ಬರಿಂದ ಬೈಕ್ ಖರೀದಿಸಿದ್ದ. ಮೊದಲ ಮಾಲಕ ಕೂಡ ದಂಡ ಕಟ್ಟಿಲ್ಲ ಎನ್ನುವುದು ತನಿಖೆ ವೇಳೆ ತಿಳಿದು ಬಂದಿದೆ.