ಬೆಂಗಳೂರು(15/11/2020): ಜೋತಿಷ್ಯರೊಬ್ಬರ ಮಾತು ಕೇಳಿ ಪತ್ನಿಗೆ ಕಿರುಕುಳ ನೀಡಿ, ಆಕೆಯ ಆತ್ಮಹತ್ಯೆಗೆ ಕಾರಣನಾಗಿದ್ದ ಪತಿ ಈಗ ಜೈಲು ಸೇರಿದ್ದಾನೆ.
ಆತ್ಮಹತ್ಯೆ ಮಾಡಿಕೊಂಡಿರುವ ವಿವಾಹಿತೆಯನ್ನು ಅಶ್ವಿನಿ(25) ಎಂದು ಗುರುತಿಸಲಾಗಿದೆ. 9 ತಿಂಗಳ ಹಿಂದೆಯಷ್ಟೇ ಈಕೆಗೆ ಯುವರಾಜ್ ಎಂಬಾತನೊಂದಿಗೆ ಲವ್ ಮ್ಯಾರೇಜ್ ಆಗಿತ್ತು.
ಕಾಲೇಜ್ ದಿನಗಳಲ್ಲಿ ಇಬ್ಬರ ನಡುವೆ ಪ್ರೇಮಾಂಕುರವಾಗಿ, ಕುಟುಂಬದ ಒಪ್ಪಿಗೆ ಪಡೆದು ವಿವಾಹವಾಗಿದ್ದರು.
ಇತ್ತೀಚೆಗೆ ಯುವರಾಜ್ ಜ್ಯೋತಿಷ್ಯರೊಬ್ಬರನ್ನು ಭೇಟಿ ಮಾಡಿದ್ದು, ಅವರು ಅಶ್ವಿನ್ ಗೆ ಮಕ್ಕಳಾಗುವುದಿಲ್ಲ ಎಂದಿದ್ದರು. ಆನಂತರ ಯುವರಾಜಗ ಹಾಗೂ ಆತನ ಕುಟುಂಬ ಅಶ್ವಿನಿಗೆ ಕಿರುಕುಳ ನೀಡಲಾರಂಭಿಸಿದ್ದರು.
ಅಲ್ಲದೆ, ಕೊರೋನಾ ಕಾರಣದಿಂ ಕೆಲಸ ಕಳೆದುಕೊಂಡಿದ್ದ ಯುವರಾಜ್ ವರದಕ್ಷಿಣೆಗಾಗಿ ಪೀಡಿಸುತ್ತಿದ್ದನು. ನವಂಬರ್ 13ರಂದು ಪತಿ ಪತ್ನಿಯ ನಡುವೆ ವಾಗ್ವಾದ ನಡೆದಿದ್ದು, ಮರುದಿನ ಬೆಳಿಗ್ಗೆ ಯುವರಾಜ್ ಅಶ್ವಿನಿಗೆ ಕಿರುಕುಳ ನೀಡಿದ್ದ ಎನ್ನಲಾಗಿದೆ. ನಂತರ ಅಶ್ವಿನಿ ತನ್ನ ಸಹೋದರಿ ವರ್ಷಿನಿಗೆ ಕರೆ ಮಾಡಿ, ವಿಷಯ ತಿಳಿಸಿದ್ದಾಳೆ. ಇದಾದ ಕೆಲವೇ ಗಂಟೆಗಳಲ್ಲಿ ಯುವರಾಜ್ ಕರೆ ಮಾಡಿ ಅಶ್ವಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಅಶ್ವಿನಿಯ ಕುಟುಂಬಸ್ಥರಿಗೆ ತಿಳಿಸಿದ್ದು, ಅವರು ಆಸ್ಪತ್ರೆಗೆ ಬರುವಷ್ಟರಲ್ಲಿ ಅಶ್ವಿನಿ ಕೊನೆಯುಸಿರೆಳೆದಿದ್ದಾಳೆ ಎನ್ನಲಾಗಿದೆ.
ಜ್ಯೋತಿಷಿಯ ಮಾತು ಕೇಳಿ ಯುವರಾಜ್ ಅಶ್ವಿನಿಗೆ ಕಿರುಕುಳ ನೀಡುತ್ತಿದ್ದುದಾಗಿ ಆಕೆ ಕುಟುಂಬಸ್ಥರು ಆರೋಪಿಸಿದ್ದಾರೆ. ಆಕೆಯ ದೇಹದಲ್ಲಿ ಗಾಯಗಳು ಕಂಡುಬಂದಿದೆ ಎನ್ನಲಾಗಿದೆ. ಆಕೆ ನೇಣು ಬಿಗಿದ ಸ್ಥಿತಿಯಲ್ಲಿದ್ದುದಾಗಿ ಸ್ಥಳೀಯರು ಹೇಳಿದ್ದಾರೆ. ಅಶ್ವಿನಿಯನ್ಬು ಸಾಯಿಸಿ ಯುವರಾಜ್ ನೇಣಿಗೆ ಹಾಕಿರುವುದಾಗಿ ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಸತ್ಯ ಏನೆಂಬುದು ಪೋಸ್ಟ್ ಮಾರ್ಟಮ್ ವರದಿ ಬಂದ ಬಳಿಕವಷ್ಟೇ ತಿಳಿಯಬೇಕು. ಸದ್ಯ ಯುವರಾಜ್ ಜೈಲು ಪಾಲಾಗಿದ್ದಾನೆ.