ಬೆಂಗಳೂರಿನ 10 ಸಾವಿರ ಹಾಸಿಗೆಗಳ ಕೋವಿಡ್ ಸೆಂಟರ್‌ ಏನಾಯ್ತು? ಈಗೇಕೆ ಅಂತಹ ಸೆಂಟರ್ ನಿರ್ಮಿಸಲು ಸರ್ಕಾರ ಮುಂದಾಗುತ್ತಿಲ್ಲ? : ರಾಜ್ಯ ಕಾಂಗ್ರೆಸ್ ಪ್ರಶ್ನೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಸೋಂಕಿತರು ಬೆಡ್ ಸಿಗದೆ ಪರದಾಡುತ್ತಿದ್ದಾರೆ, ರಾಜ್ಯ ಸರ್ಕಾರ ಕಳೆದ ಭಾರಿ 10 ಸಾವಿರ ಹಾಸಿಗೆಗಳ ಕೋವಿಡ್ ಸೆಂಟರ್‌ನ್ನು ಬಳಕೆಯೇ ಮಾಡದೆ ಮುಚ್ಚಿದಿರಿ, ಅದೊಂದು ಲೂಟಿ ಕಾರ್ಯಕ್ರಮವಾಗಿತ್ತಲ್ಲವೇ? ಈಗ ಏಕೆ ಅಂತಹ ಸೆಂಟರ್ ನಿರ್ಮಿಸಲು ಮುಂದಾಗುತ್ತಿಲ್ಲ? ಎಂದು ರಾಜ್ಯ ಕಾಂಗ್ರೆಸ್ ಪ್ರಶ್ನಿಸಿದೆ.

ಈ ಬಗ್ಗೆ ಟ್ವಿಟ್ಟರ್ ಸರಣಿ ಮುಂದುರೆಸಿದ ಕಾಂಗ್ರೆಸ್ ಕೋವಿಡ್ ಪರಿಸ್ಥಿತಿ ಎದುರಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದ್ದು, ಬೆಡ್, ಚಿಕಿತ್ಸೆ ಸಿಗದೆ ಸೋಂಕಿತರು ಹಾದಿ ಬೀದಿಗಳಲ್ಲಿ ನರಳುತ್ತಿದ್ದಾರೆ.

ಸಮುದಾಯ ಭವನಗಳು, ಕಲ್ಯಾಣ ಮಂಟಪಗಳನ್ನು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಾಡಿಗೆ ಪಡೆದು ಸೋಂಕಿನ ತೀವ್ರತೆ ಕಡಿಮೆ ಇರುವವರಿಗೆ ಚಿಕಿತ್ಸೆಯ ವ್ಯವಸ್ಥೆ ಮಾಡಬಹುದಿತ್ತು, ಏಕಿನ್ನೂ ಮಾಡಿಲ್ಲ? ರಾಜ್ಯ ಬಿಜೆಪಿ ಸರ್ಕಾರ  ಒಂದಿಡೀ ವರ್ಷದಲ್ಲಿ ನೀವು ಕಲಿತ ಪಾಠವೇನು? ಮಾಡಿಕೊಂಡ ಸಿದ್ಧತೆ ಏನು? ಎಂದು ಕಾಂಗ್ರೆಸ್ ಆರೋಪಿಸಿದೆ

ಪಿಎಂ ಕೇರ್ಸ್‌ನಲ್ಲಿ ರಾಜ್ಯಕ್ಕೆ ಹೆಚ್ಚಿನ ವೆಂಟಿಲೇಟರ್‌ಗಳಿಗೆ ಏಕೆ ಬೇಡಿಕೆ ಇಟ್ಟಿಲ್ಲ?
ಕಳೆದ ನವೆಂಬರ್‌ನಲ್ಲಿಯೇ ತಜ್ಞರು ಎಚ್ಚರಿಕೆ ನೀಡಿದ್ದಾಗ್ಯೂ ಆರೋಗ್ಯ ಕ್ಷೇತ್ರದ ಬಲವರ್ಧನೆಗೆ ಯಾವುದೇ ಕ್ರಮ ಕೈಗೊಂಡಿಲ್ಲವೇಕೆ?
ಕೇಂದ್ರ ಸರ್ಕಾರಕ್ಕೆ ಸುಮಾರು 10 ಕೋಟಿಗೂ ಹೆಚ್ಚು ಡೋಸ್‌ಗಳನ್ನು 150 ರೂ ಗಳಿಗೆ ನೀಡಿದ್ದ ಲಸಿಕೆ ಕಂಪೆನಿಗಳು ಹೊಸದಾಗಿ ಪರಿಷ್ಕರಣೆ ಮಾಡಿ ರಾಜ್ಯಗಳಿಗೆ ₹400 ದರ ನಿಗದಿಪಡಿಸಿವೆ.

ರಾಜ್ಯದ #ಸೋಂಕಿತಸರ್ಕಾರ ಸರ್ವರಿಗೂ ಉಚಿತ ಲಸಿಕೆ ನೀಡುವ ಘೋಷಣೆಯನ್ನೇಕೆ ಮಾಡುತ್ತಿಲ್ಲ?
ಲಸಿಕೆ ಖರೀದಿಗೆ ಹಣ ಕ್ರೋಡೀಕರಣದ ಬಗ್ಗೆ ಏಕೆ ಯೋಚಿಸುತ್ತಿಲ್ಲ? ಎಂದು ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಕರೋನಾ ನಿಗ್ರಹಿಸುವಿಕೆಯ ಭಾಗವಾದ ಟ್ರೀಟಿಂಗ್‌ನಲ್ಲಿ ಅಧೋಗತಿಗೆ ಇಳಿದಿದ್ದು ನಿತ್ಯ ಕಾಣುತ್ತಿದೆ, ಟ್ರಾಕಿಂಗ್‌ನಲ್ಲಿಯೂ ಸರ್ಕಾರ ವಿಫಲವಾಗಿದೆ. ಬಿಎಸ್ ವೈ ಸೇರಿದಂತೆ, ಮಂತ್ರಿಗಳು, ಶಾಸಕರಿಗೆ ಸೋಂಕು ತಗುಲಿತ್ತು, ಅವರ ಸಂಪರ್ಕಕ್ಕೆ ಬಂದವರಿಗೆ ಯಾವುದೇ ಕಟ್ಟುನಿಟ್ಟಿನ ಐಸೋಲೇಶನ್ ನಿಯಮ ಪಾಲಿಸಲಿಲ್ಲ. ಇದೇ #ಸೋಂಕಿತಸರ್ಕಾರ ದ ವೈಫಲ್ಯಕ್ಕೆ ಸಾಕ್ಷಿ ಎಂದು ಕಾಂಗ್ರೆಸ್ ಟೀಕಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು