ಬೆಂಗಳೂರು(22-12-2020) ಬೆಂಗಳೂರು ಕೆ.ಜೆ ಹಳ್ಳಿ, ಡಿ.ಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐಎ ಅಧಿಕಾರಿಗಳು ಪಿಎಫ್ ಐ ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಇಮ್ರಾನ್ ಅಹ್ಮದ್, ರುಬಾ ವಕಾಸ್, ಅಬ್ಬಾಸ್ , ಅಜಿಲ್ ಪಾಷಾ, ಇರ್ಪಾನ್ ಖಾನ್, ಅಕ್ಬರ್ ಖಾನ್ ಸೇರಿ 17ಮಂದಿ ಪಿಎಫ್ ಐ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಡಿ.ಜೆ ಹಳ್ಳಿ, ಕೆ.ಜೆ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಹಿಂಸಾಚಾರಕ್ಕೆ ಮೊದಲು ಬಂಧಿತರು ಸಭೆಯನ್ನು ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಯ ಅಳಿಯ ನವೀನ್ ಪ್ರವಾದಿ ವಿರುದ್ಧ ಪೇಸ್ ಬುಕ್ ನಲ್ಲಿ ಅವಾಚ್ಯವಾಗಿ ಸ್ಟೇಟಸ್ ಹಾಕಿದ ಬಳಿಕ ಡಿ.ಜೆ ಹಳ್ಳಿ, ಕೆ.ಜೆ ಹಳ್ಳಿಯಲ್ಲಿ ಗಲಭೆ ನಿರ್ಮಾಣವಾಗಿತ್ತು.