ದೇರಳಕಟ್ಟೆ(19-11-2020): ಮಂಜನಾಡಿ ಗ್ರಾಮದ ಬಂಡಸಾಲೆಯಲ್ಲಿ ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರಿಗೆ ತೀವ್ರ ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.
ಮಂಜನಾಡಿ ಗ್ರಾಮದ ಬಂಡಸಾಲೆಯಲ್ಲಿ ತಡೆಗೋಡೆ ನಿರ್ಮಾಣ ಕಾರ್ಯದಲ್ಲಿ ಅಕ್ರಮ ಕಂಡುಬಂದಿದ್ದು ಮಾಜಿ ಸಚಿವ, ಸ್ಥಳೀಯ ಶಾಸಕರಾದ ಯುಟಿ ಖಾದರ್ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಎನ್.ಎಸ್ ಕರೀಂರವರ ವಿಶೇಷ ಅದೇಶದ ಮೇರೆಗೆ ಇಂದು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಇಫ್ತಿಕಾರ್ ಪರ್ತಿಪಾಡಿಯವರು ಕಾಮಗಾರಿಯನ್ನು ಪರಿಶೀಲಿಸಿದಾಗ ಕಾಮಗಾರಿಯು ಕಳೆಪೆಯಾಗಿದ್ದು ಸದ್ರಿ ಗುತ್ತಿಗೆದಾರರಿಗೆ ಈ ಸಂದರ್ಭದಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ಪುನರ್ ನಿರ್ಮಿಸಿಕೊಡಲು ಈ ಸಂದರ್ಭದಲ್ಲಿ ಗುತ್ತಿಗೆದಾರರಿಗೆ ಸೂಚನೆಯನ್ನು ನೀಡಲಾಗಿದೆ.