ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ| ಮಹತ್ತರ ಮಸೂದೆ ಜಾರಿಗೆ ಮುಂದಾದ ಮಹಾರಾಷ್ಟ್ರ ಸರಕಾರ

uddav tackrey
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(03-02-2021): ಮಹಾರಾಷ್ಟ್ರ ಸರಕಾರ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ ಮಾಡುವ ಬಗ್ಗೆ ಮಹತ್ತರ ಮಸೂದೆಯೊಂದನ್ನು ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ತರಲು ಮುಂದಾಗಿದೆ ಎಂದು ವರದಿಯಾಗಿದೆ.

ಸ್ಪೀಕರ್ ನಾನಾಪಾಟೇಲ್ ಈ ಕುರಿತು ಮಾಹಿತಿಯನ್ನು ಸಂದರ್ಶನ ವೊಂದರಲ್ಲಿ ಬಹಿರಂಗ ಮಾಡಿದ್ದು, ಬ್ಯಾಲೆಟ್ ಪೇಪರ್ ಬಳಕೆ ಬಗ್ಗೆ ಮಸೂದೆಗೆ ಕರಡನ್ನು ಸಿದ್ದಪಡಿಸಲಾಗುತ್ತದೆ ಎಂದು ಹೇಳಿದ್ದಾರೆ.

ಸಂವಿಧಾನದ 328ನೇ ವಿಧಿ ಪ್ರಕಾರ ಈ ವಿಷಯದಲ್ಲಿ  ಕಾನೂನು ತರಲು ಸಾಧ್ಯವಿದೆ. ಈ ಕುರಿತು ಚುನಾವಣಾ ಆಯೋಗದ ಜೊತೆಯೂ ಚರ್ಚಿಸಲಾಗಿದೆ ಎಂದು ಹೇಳಿದ್ದಾರೆ. ಚುನಾವಣೆಯಲ್ಲಿ ಇವಿಎಂ ಬಳಕೆ ಹಿನ್ನೆಲೆಯಲ್ಲಿ ಚುನಾವಣಾ ಪಾರದರ್ಶಕತೆ ಬಗ್ಗೆ ವ್ಯಾಪಕ ಪ್ರಶ್ನೆ ಮೂಡಿದ್ದವು. ಇವಿಎಂ ತಿರುಚಲಾಗುತ್ತಿದೆ ಎಂಬಂತಹ ಗಂಭೀರವಾದಂತಹ ಆರೋಪಗಳು ಕೂಡ ಕೇಳಿ ಬಂದಿದ್ದವು. ಇದರಿಂದಾಗಿ ಮಹಾ ಸರಕಾರ ಮಹತ್ವದ ಹೆಜ್ಜೆಗೆ ಮುಂದಾಗಿದೆ ಎನ್ನಲಾಗಿದೆ.

 

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು