ಬಳಕೆದಾರರ ಕ್ಷಮೆ ಕೋರಿದ ಫೇಸ್ಬುಕ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಕ್ಯಾಲಿಫೋರ್ನಿಯಾ: ಅಂತರ್ಜಾಲ ದೈತ್ಯ ಫೇಸ್ಬುಕ್ ಸಂಸ್ಥೆಯು ತನ್ನ ಬಳಕೆದಾರರ ಕ್ಷಮೆ ಕೋರಿದೆ. ಸಮಸ್ಯೆಯನ್ನು ಈಗಾಗಲೇ ಸರಿಪಡಿಸಿರುವುದಾಗಿಯೂ ಹೇಳಿ ಕೊಂಡಿದೆ.

ಭಾರತವೂ ಸೇರಿದಂತೆ ವಿಶ್ವಾದ್ಯಂತ ವಾಟ್ಸಪ್ ಮತ್ತು ಇನ್ಸ್ಟಾಗ್ರಾಮುಗಳಲ್ಲಿ ತಾಂತ್ರಿಕ ದೋಷಗಳು ತಲೆದೂರಿತ್ತು. ಸುಮಾರು ನಲ್ಚತ್ತೈದು ನಿಮಿಷಗಳ ಕಾಲ ಸಂದೇಶಗಳನ್ನು ಕಳುಹಿಸಲು, ಸ್ವೀಕರಿಸಲು, ಪೋಸ್ಟ್ ಹಾಕಲು ಸಾಧ್ಯವಾಗಿರಲಿಲ್ಲ. ಕೆಲವು ಕಡೆಗಳಲ್ಲಿ ಫೇಸ್ಬುಕ್ ಮೆಸೆಂಜರ್ ಕೂಡಾ ಕೈಕೊಟ್ಟಿತ್ತೆಂದು ವರದಿಯಾಗಿದೆ.

ವಾಟ್ಸಪ್ ಮತ್ತು ಇನ್ಸ್ಟಾಗ್ರಾಮಿನ ಮಾಲಕತ್ವವನ್ನು ಫೇಸ್ಬುಕ್ ಸಂಸ್ಥೆಯು ವಹಿಸಿಕೊಂಡಿದೆ. ಕಾರಣದಿಂದಲೇ ಅದು ತೊಂದರೆಗೊಳಗಾದ ಬಳಕೆದಾರರ ಕ್ಷಮೆ ಕೋರಲು ಮುಂದಾಗಿದೆ.

ಆ್ಯಪುಗಳಲ್ಲಿ ತಾಂತ್ರಿಕ ದೋಷಗಳು ಕಂಡು ಬಂದಾಗಲೇ ನೆಟ್ ಬಳಕೆದಾರರಲ್ಲಿ ಚಡಪಡಿಕೆ ಕಂಡು ಬಂದಿದ್ದು, ಇದರ ವಿರುದ್ಧ ಧ್ವನಿಯೆತ್ತಲು ನೆಟ್ಟಿಗರು ಟ್ವಿಟರ್ ಮೊರೆ ಹೋಗಿದ್ದರು. ಟ್ವಿಟರಿನಲ್ಲಿ ವಾಟ್ಸಪ್ ಡೌನ್ ಹ್ಯಾಶ್‍ಟ್ಯಾಗ್ ನಲ್ಲಿ ವೈವಿಧ್ಯಮಯ, ರಸವತ್ತಾದ ಪೋಸ್ಟುಗಳು ಟ್ರೆಂಡ್ ಆಗಿತ್ತು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು