ಬಿಲ್ಲು ಹಿಡಿಯುತ್ತಿದ್ದ ಕೈಯಲ್ಲಿ ಬಜ್ಜಿ, ಬೋಂಡಾ ಮಾಡುತ್ತಿರುವ ರಾಷ್ಟ್ರಮಟ್ಟದ ಕ್ರೀಡಾಪಟು!

mamatha
Share on facebook
Share on twitter
Share on linkedin
Share on whatsapp
Share on telegram
Share on email
Share on print

ರಾಂಚಿ: ಬಿಲ್ಲುಗಾರಿಕೆಯಲ್ಲಿ ಜ್ಯೂನಿಯರ್ ವಿಭಾಗದಲ್ಲಿ ರಾಷ್ಟ್ರಮಟ್ಟದ ಕ್ರೀಡಾಪಟುವೊಬ್ಬರು ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ತನ್ನ ಕುಟುಂಬವನ್ನು ರಕ್ಷಿಸಲು ಬಜ್ಜಿ, ಬೋಂಡಾದ ಅಂಗಡಿ ಇಟ್ಟ ಘಟನೆ ನಡೆದಿದೆ.

23 ವರ್ಷ ವಯಸ್ಸಿನ ಪ್ರತಿಭಾನ್ವಿತ ಯುವತಿ ಮಮತಾ ರಾಂಚಿಯಲ್ಲಿ ತರಬೇತಿ ಪಡೆಯುತ್ತಿದ್ದರು. ಕೊರೊನಾ ಹಿನ್ನೆಲೆಯಲ್ಲಿ ಮನೆಗೆ ಅವರು ಆಗಮಿಸಿದ್ದರು. ಈ ನಡುವೆ ಕುಟುಂಬದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು,  ಪರಿಸ್ಥಿತಿಯನ್ನು ಸುಧಾರಿಸಲು ಸದ್ಯ ಪಕೋಡಾ ಮಾರುವುದೇ ಕೊನೆಯ ದಾರಿಯಾಗಿದೆ. ಹೀಗಾಗಿ ರಾಷ್ಟ್ರ ಮಟ್ಟದ ಪ್ರತಿಭೆಯೊಂದು ನಾಶವಾಗುತ್ತಿದೆ.

2010ರಲ್ಲಿ ಜ್ಯೂನಿಯರ್ ಹಾಗೂ 2014ರಲ್ಲಿ ಸಬ್ ಜ್ಯೂನಿಯರ್ ಮಟ್ಟದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದ ಮಮತಾ ಪ್ರತಿಭಾನ್ವಿತರಾಗಿದ್ದಾರೆ.  ಆದರೆ ಸರ್ಕಾರದ ಬೆಂಬಲವೇ ಇಲ್ಲದ ಕಾರಣ ಅವರು ಅನಿವಾರ್ಯವಾಗಿ ಈ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

ನಾನು ಬಜ್ಜಿ ಅಂಗಡಿ ನಡೆಸಿಲ್ಲಅಂದ್ರೆ,  ನಮ್ಮ ಕುಟುಂಬ ಹಸಿವಿನಲ್ಲಿ ಕಂಗಡೆಬೇಕಾಗುತ್ತದೆ. ಸರ್ಕಾರ ನಮಗೆ ಏನಾದರೂ ಸಹಕಾರ ನೀಡಿದರೆ ನಮ್ಮ ಕುಟುಂಬಕ್ಕೆ ನೆರವಾಗುತ್ತದೆ. ಇಲ್ಲದಿದ್ದರೆ, ರಾಷ್ಟ್ರಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಬೇಕು ಎನ್ನುವ ನನ್ನ ಕನಸು ಹಾಗೆಯೇ ಉಳಿದು ಬಿಡುತ್ತದೆ ಎಂದು ಮಮತಾ ಹೇಳಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು