ಚಿನ್ನದ ರಾಣಿ ಸ್ವಪ್ನ ಸುರೇಶ್ ಗೆ ಜಾಮೀನು

Share on facebook
Share on twitter
Share on linkedin
Share on whatsapp
Share on telegram
Share on email
Share on print

ಕೊಚ್ಚಿ(05-10-2020): ದೇಶಾದ್ಯಂತ ಭಾರೀ ಕೋಲಾಹಲ ಸೃಷ್ಟಿಸಿದ್ದ ಅಕ್ರಮ ಚಿನ್ನಸಾಗಾಟಕ್ಕೆ ಸಂಬಂಧಪಟ್ಟು ಕಸ್ಟಮ್ಸ್ ವಿಚಾರಣೆ ನಡೆಸುತ್ತಿರುವ ಪ್ರಕರಣದಲ್ಲಿ ಸ್ವಪ್ನ ಸುರೇಶ್ ಗೆ ಜಾಮೀನು ಮಂಜೂರಾಗಿದ್ದು, ಇದರೊಂದಿಗೆ ಈ ಪ್ರಕರಣದಲ್ಲಿ ಹದಿನೇಳು ಆರೋಪಿಗಳಿಗೆ ಜಾಮೀನು ದೊರೆತಂತಾಯಿತು.

ಆದರೆ ಎನ್‌ಐಎ ಕೇಸು ಮುಂದುವರಿದಿರುವುದರಿಂದ ಬಿಡುಗಡೆಯಾಗಲು ಸ್ವಪ್ನ ಗೆ ಅಸಾಧ್ಯವಾಗಿದೆ. ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಸ್ವಪ್ನ ಸುರೇಶ್ ವಿರುದ್ಧ ಕಸ್ಟಮ್ಸ್ ಮೊದಲು ಎಫ್‌ಐಆರ್ ದಾಖಲಿಸಿತ್ತು. ಎರಡು ಬಾರಿ ಜಾಮೀನು ಅರ್ಜಿ ತಿರಸ್ಕರಿಸಲ್ಪಟ್ಟಿತ್ತು. ಮೂರನೇ ಬಾರಿ ಸಲ್ಲಿಸಿದ ಜಾಮೀನು ಅರ್ಜಿ ಸ್ವೀಕೃತಗೊಂಡು ಇದೀಗ ಜಾಮೀನು ಲಭಿಸಿದೆ. ಸ್ವಪ್ನ ವಿರುದ್ಧ ಎನ್ಫೋರ್ಸೆಮೆಂಟ್ ಕೂಡ ದೂರು ದಾಖಲಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು