ಯುಎಇ: ಬಹುಬಾರಿ ಪ್ರವೇಶಿಸಲು ಸಾಧ್ಯವಾಗುವ ಪ್ರವಾಸಿ ವೀಸಾಗೆ ಅನುಮತಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

 

ಅಬುದಾಬಿ: ಬಹುಬಾರಿ ಯುಎಇ ಪ್ರವೇಶಿಸಲು ಸಾಧ್ಯವಾಗುವಂಥ ಪ್ರವಾಸಿ ವೀಸಾಗೆ ಅನುಮತಿ ದೊರೆತಿದೆ. ಯಾವುದೇ ದೇಶದ ಪ್ರಜೆಗಳಿಗೆ ವೀಸಾ ಪಡೆಯಬಹುದಾಗಿದೆ.

ಇಂತಹ ವೀಸಾಗಳು ಯುಎಇಯಿಂದ ಹಲವು ಬಾರಿ ನಿರ್ಗಮಿಸಲು ಮತ್ತು ಹಲವು ಆಗಮಿಸಲು ಸಾಧ್ಯವಾಗುವಂತಹ ಸುಧೀರ್ಘ ಕಾಲಾವಧಿಯುಳ್ಳವುಗಳು.  ಪ್ರತಿ ಬಾರಿ ಯುಎಇಗೆ ಬಂದಾಗಲೂ ತೊಂಭತ್ತು ದಿನಗಳ ವರೆಗೆ ಅಲ್ಲಿಯೇ ತಂಗಬಹುದು. ಅಗತ್ಯ ಬಂದರೆ, ಇನ್ನೂ ತೊಂಭತ್ತು ದಿನಗಳಿಗೆ ವಿಸ್ತರಿಸಲೂ ಅವಕಾಶವಿದೆ.

ಮನೆಯಲ್ಲಿದ್ದುಕೊಂಡೇ ಕೆಲಸ ಮಾಡುವವರಿಗೆ ವಿಶೇಷವಾದ ವರ್ಚುವಲ್ ಉದ್ಯೋಗ ವೀಸಾಗಳಿಗೂ ಅನುಮತಿ ಸಿಗಲಿದ್ದು, ಇಂತಹ ವೀಸಾಗಳಿಗೆ ಪ್ರಾಯೋಜಕರ ಅಗತ್ಯವಿರುವುದಿಲ್ಲ. ಇದು ಮನೆಯಲ್ಲಿ ಕುಳಿತು ಉದ್ಯೋಗ ಮಾಡುವವರಿಗೆ ಯುಎಇಯಲ್ಲಿ ವಾಸಿಸಲು ಅನುಕೂಲಕರ ಸೌಲಭ್ಯಗಳನ್ನು ಒದಗಿಸಿಕೊಡುವ ಉದ್ಧೇಶವನ್ನು ಹೊಂದಿದೆ.  ಎಲ್ಲಾ ದೇಶಗಳ ಪ್ರಜೆಗಳಿಗೂ ಸೌಲಭ್ಯ ದೊರೆಯಲಿದೆ.

ಎಲ್ಲಾ ನವೀನ ಕಾನೂನುಗಳಿಗೆ ಯುಎಇ ಸಂಸತ್ತಿನಲ್ಲಿ ಅನುಮತಿ ದೊರೆತರೂ, ಅಧಿಕೃತ ಘೋಷಣೆ ಇನ್ನಷ್ಟೇ ಬರಬೇಕಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು