ವಿಶ್ವದಲ್ಲೇ ಭಾರತದಲ್ಲಿ ಮುಸ್ಲಿಮರು ಅತ್ಯಂತ ನೆಮ್ಮದಿಯಿಂದಿದ್ದಾರೆ-ಆರೆಸ್ಸೆಸ್  

rss
Share on facebook
Share on twitter
Share on linkedin
Share on whatsapp
Share on telegram
Share on email
Share on print

ವದೆಹಲಿ(10-10-2020): ವಿಶ್ವದ ಯಾವುದೇ ದೇಶಕ್ಕಿಂತ ಭಾರತದಲ್ಲಿ ಮುಸ್ಲಿಮರು ಅತ್ಯಂತ ನೆಮ್ಮದಿಯಿಂದ ಬದುಕುತ್ತಿದ್ದಾರೆ ಎಂದು ಬಲಪಂಥೀಯ ಸಂಘಟನೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ಕೊಟ್ಟಿದ್ದಾರೆ.

ಮಹಾರಾಷ್ಟ್ರದಲ್ಲಿ ಸಂದರ್ಶನದಲ್ಲಿ ಮಾತನಾಡಿದ ಮೋಹನ್ ಭಾಗವತ್, ಭಾರತೀಯ ಮುಸಲ್ಮಾನರು ವಿಶ್ವದಲ್ಲಿಯೇ ಅತ್ಯಂತ ತೃಪ್ತಿಯಿಂದಿದ್ದಾರೆ.ಎಲ್ಲಾ ಧರ್ಮದ ಜನರು ಇಲ್ಲಿ ಒಟ್ಟಾಗಿದ್ದಾರೆ. ದೇಶದ ಕಲೆ, ಸಂಸ್ಕೃತಿ ಮೇಲೆ ದಾಳಿಯಾದ ಸಂದರ್ಭಗಳಲ್ಲಿ ಎಲ್ಲಾ ಧರ್ಮ, ನಂಬಿಕೆಯ ಜನರು ಇಲ್ಲಿ ಒಗ್ಗಟ್ಟಾಗಿ ನಿಂತಿದ್ದಾರೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಪಾಕಿಸ್ತಾನದಂತಲ್ಲ. ಪಾಕಿಸ್ತಾನದಲ್ಲಿ ಬೇರೆ ಧರ್ಮಗಳ ಜನರಿಗೆ ಹಕ್ಕಿಲ್ಲ. ಭಾರತದಲ್ಲಿ ಹಿಂದೂಗಳು ಮಾತ್ರ ನೆಲೆಸಬಹುದು, ಜೀವನ ಮಾಡಬಹುದು, ಇಲ್ಲಿ ಹಿಂದೂಗಳು ಶ್ರೇಷ್ಠರು ಎಂದು ಹೇಳಿಕೊಂಡು ಜೀವನ ಮಾಡಬೇಕು ಎಂದು ಸಂವಿಧಾನ ಹೇಳಿಲ್ಲ. ನಮ್ಮ ದೇಶದ ಸಂಸ್ಕೃತಿ, ಸ್ವಭಾವ, ಆ ಮೂಲಗುಣ ಇರುವವರನ್ನು ನಾವು ಹಿಂದೂಗಳು ಎಂದು ಕರೆಯುತ್ತೇವೆ ಎಂದು ಹೇಳಿದ್ದಾರೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು