ಬಾಗಲಕೋಟೆ(25-02-2021): ಆಸ್ತಿ ಪತ್ರಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ಗೆ ಸೀಮೆ ಎಣ್ಣೆ ಸುರಿದು ತಂದೆ-ಮಗ ಬೆಂಕಿಹಚ್ಚಲು ಪ್ರಯತ್ನಿಸಿರುವ ಘಟನೆ ಜಮಖಂಡಿಯಲ್ಲಿ ನಡೆದಿದೆ.
ಲಕ್ಷ್ಮಣ ಹಾಗೂ ಅವರ ಪುತ್ರ ಬಸವರಾಜ ಆರೋಪಿಗಳು. ಗ್ರೇಡ್ 2 ತಹಶೀಲ್ದಾರ್ ನಾಗಪ್ಪ ಬಿರಡಿ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಲು ಯತ್ನಿಸಿದ್ದಾರೆ. ತಕ್ಷಣ ತಹಶೀಲ್ದಾರ್ ಕಚೇರಿಯಿಂದ ಹೊರಗ ಓಡಿ ಬಂದು ಪ್ರಾಣವನ್ನು ಉಳಿಸಿಕೊಂಡಿದ್ದಾರೆ.
ರೈತ ಲಕ್ಷ್ಮಣ 2016ರಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮೈಗೂರು ಗ್ರಾಮದ ಸರ್ವೆ ನಂ.190/2ರಲ್ಲಿರುವಂತ 4 ಎಕರೆ, 16 ಗುಂಟೆ ಜಾಗವನ್ನು ತಮ್ಮ ಹೆಸರಿಗೆ ನೋಂದಾಯಿಸಿ ಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪರಿಶೀಲಿಸಿದ ಜಮಖಂಡಿಯ ಗ್ರೇಡ್-2 ತಹಶೀಲ್ದಾರ್ ನಾಗಪ್ಪ ಬಿರಡಿ ಇದು ನನ್ನ ವ್ಯಾಪ್ತಿಗೆ ಬರೋದಿಲ್ಲ ಎಂದು ಅರ್ಜಿಯನ್ನು ವಜಾ ಮಾಡಿದ್ದರು. ಇದರಿಂದ ಕೋಪಗೊಂಡು ಕೃತ್ಯಕ್ಕೆ ಮುಂದಾಗಿದ್ದಾರೆ.