ಗರ್ಭಿಣಿ ಸದಸ್ಯೆಯನ್ನು ಎಳೆದಾಡಿದ್ದ ಶಾಸಕ ಸಿದ್ದು ಸವದಿ| ಪುರಸಭೆ ಸದಸ್ಯೆಗೆ ಗರ್ಭಪಾತ!

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬಾಗಲಕೋಟೆ(30-11-2020): ಪುರಸಭೆ ಚುನಾವಣೆ ವೇಳೆ ಶಾಸಕ ಸಿದ್ದು ಸವದಿ ಎಳೆದಾಡಿದ್ದ ಬಿಜೆಪಿಯ ಮಹಿಳಾ ಪುರಸಭೆ ಸದಸ್ಯೆಗೆ ಗರ್ಭಪಾತವಾಗಿರುವ ಬಗ್ಗೆ ವರದಿಯಾಗಿದೆ.

ನ.9ರಂದು ಮಹಾಲಿಂಗಾಪುರ ಪುರಸಭೆ ಅಧ್ಯಕ್ಷಗಾಧಿಗೆ ಚುನಾವಣೆ ನಡೆದಿತ್ತು. ಈ ವೇಳೆ ಬಿಜೆಪಿಯ ಮೂವರು ಸದಸ್ಯೆಯರು ಅಧ್ಯಕ್ಷ ಸ್ಥಾನದ ರೇಸ್ ನಲ್ಲಿದ್ದರು. ತಮಗೆ ಅವಕಾಶ ಸಿಕ್ಕಿಲ್ಲ ಎಂದು ಕಾಂಗ್ರೆಸ್ ಗೆ ಬೆಂಬಲ ವ್ಯಕ್ತಪಡಿಸಲು ಮುಂದಾಗಿದ್ದರು.

ಇದನ್ನು ತಿಳಿದ ತೇರದಾಳ ಶಾಸಕ ಸಿದ್ದು ಸವದಿ ಹಾಗೂ ಬೆಂಬಲಿಗರು ಬಿಜೆಪಿಯ ಸದಸ್ಯರಾದ ಗೋದಾವರಿ, ಚಾಂದಿನಿ ನಾಯ್ಕ ಸವಿತಾ ಹುರಕಡ್ಲಿ ಅವರ ಮೇಲೆ ಹಲ್ಲೆ ನಡೆಸಿದ್ದರು.

ಇನ್ನು ಮಹಿಳಾ ಸದಸ್ಯರನ್ನು ಎಳೆದಾಡಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು. ಘಟನೆಯಲ್ಲಿ  ಬಿಜೆಪಿ ಸದಸ್ಯೆ ಚಾಂದಿನಿ ನಾಯ್ಕ ಗಾಯಗೊಂಡಿದ್ದರು. ಇದೀಗ ಅವರಿಗೆ ಗರ್ಭಪಾತವಾಗಿದೆ.

 

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು