ಬಡವರಿಗೆ ಅನ್ನಭಾಗ್ಯದ ಅಕ್ಕಿ 10 ಕೆಜಿ ನೀಡುವಂತೆ ಆಗ್ರಹಿಸಿ ‘ಪತ್ರ ಚಳವಳಿ’ ಆರಂಭಿಸಿದ ರಾಜ್ಯ ಕಾಂಗ್ರೆಸ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಸರ್ಕಾರ ಬಡವರಿಗೆ ಕೇವಲ 2 ಕೆಜಿ ಅಕ್ಕಿ ನೀಡಲು ಮುಂದಾಗಿದೆ. 2 ಕೆಜಿ ಬೇಡ, 10 ಕೆಜಿ ನೀಡಲು ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವ ಮೂಲಕ ರಾಜ್ಯಾದ್ಯಂತ ಪತ್ರ ಚಳವಳಿ ನಡೆಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.

ಕೊರೊನ ಕಷ್ಟ ಕಾಲದಲ್ಲಿ ಯಾರೂ ಹಸಿವಿನಿಂದ ನರಳಬಾರದು, ನಿರುದ್ಯೋಗ, ಬೆಲೆ ಏರಿಕೆ, ಅದಾಯವಿಲ್ಲದೆ ಕಂಗೆಟ್ಟಿದ್ದ ಜನತೆಗೆ ಲಾಕ್‌ಡೌನ್ ಮತ್ತೊಂದು ಆಘಾತ ನೀಡಿದೆ. ಬಡವರಿಗೆ ಆಸರೆಯಾಗಿದ್ದ ಅನ್ನಭಾಗ್ಯದ ಅಕ್ಕಿ ಕಡಿತಗೊಳಿದ್ದನ್ನು ವಿರೋಧಿಸಿ ಹಾಗೂ ಹತ್ತು ಕೆಜಿಗೆ ಏರಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಪತ್ರ ಚಳುವಳಿ ಹಮ್ಮಿಕೊಂಡಿದೆ.
ಎಲ್ಲರೂ ಈ ಅಭಿಯಾನದಲ್ಲಿ ಕೈಜೋಡಿಸುವಂತೆ ಡಿಕೆಶಿ ವಿನಂತಿಸಿದ್ದಾರೆ.

ಸರ್ಕಾರ ಏಳು ಕೆಜಿ ಪಡಿತರ ಅಕ್ಕಿಯನ್ನು ಕಡಿತಗೊಳಿಸಿ, ಐದು ಕೆಜಿ ಮಾಡಿತ್ತು, ಮತ್ತೆ ಈಗ ಕುಟುಂಬದ ಪ್ರತಿ ಸದಸ್ಯರಿಗೆ 2ಕೆಜಿ ಮಾತ್ರ ಅಕ್ಕಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಲಾಕ್ ಡೌನ್ ಸಂದರ್ಭದ ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಜನರು ಕೆಲಸ ಕಳೆದುಕೊಂಡು ಮನೆಯಲ್ಲಿದ್ದಾರೆ. ಜೀವದ ಜೊತೆಗೆ ಜೀವನ ನಿರ್ವಹಣೆ ಕೂಡ ಅಷ್ಟೇ ಮುಖ್ಯ. ಸರ್ಕಾರ 2ಕೆಜಿ ಅಕ್ಕಿ ಕೊಡುವುದು ಬೇಡ, 10ಕೆಜಿ ಅಕ್ಕಿ ಕೊಡುವಂತೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಒತ್ತಾಯಕ್ಕೆ ಮುಂದಾಗಿದೆ.

ಈ ಕುರಿತು ರಾಜ್ಯದ ಕಾರ್ಯಕರ್ತರಿಗೆ , ಸಾರ್ವಜನಿಕರಿಗೆ ವಿನಂತಿಸಿ ಅನ್ನ ಭಾಗ್ಯದ ಅಕ್ಕಿಯನ್ನು 10 ಕೆಜಿಗೆ ಏರಿಸಬೇಕೆಂದು ಮುಖ್ಯಮಂತ್ರಿಗಳಿಗೆ ಪತ್ರದ ಚಳವಳಿ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮನವಿ ಮಾಡಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು