ಮಗು ಹುಟ್ಟಿದ ನಂತರ ಮತ್ತೊಮ್ಮೆ ಗರ್ಭ ಧರಿಸಲು ಎಷ್ಟು ಗ್ಯಾಪ್ ಕೊಡಬೇಕು?

baby
Share on facebook
Share on twitter
Share on linkedin
Share on whatsapp
Share on telegram
Share on email
Share on print

ಒಂದು ಮಗು ಹುಟ್ಟಿದ ನಂತರ ಮತ್ತೊಂದು ಮಗು ಪಡೆಯಬೇಕು ಎಂಬುದು ಅನೇಕ ದಂಪತಿಗಳ ಆಸೆ. ಆದರೆ, ಕೆಲವರು ಸರಿಯಾಗಿ ಪ್ಲ್ಯಾನ್ ಮಾಡದೆ ತೊಂದರೆಗೆ ಸಿಲುಕಿಕೊಳ್ಳುತ್ತಾರೆ.

ಕೆಲವೊಮ್ಮೆ ಒಂದು ಮಗುವಾದ ನಂತರ ಮತ್ತೊಂದು ಮಗು ಹುಟ್ಟಲು ಕೇವಲ ಒಂದು ವರ್ಷ ಅಷ್ಟೇ ಗ್ಯಾಪ್ ಇರುತ್ತದೆ. ಕೆಲವಮ್ಮೊ ಮೊದಲನೇ ಮಗುವಿಗೆ ಹಾಗೂ ಎರಡನೇ ಮಗುವಿಗೆ 20 ವರ್ಷ ಗ್ಯಾಪ್ ಇದ್ದಂಥ ಉದಾಹರಣೆಗಳೂ ಇವೆ.

ಹಾಗಾದ್ರೆ, ಎರಡನೇ ಮಗು ಪಡೆಯಲು ಸರಿಯಾದ ಅವಧಿ ಎಷ್ಟು? ಆ ಬಗ್ಗೆ ಇಲ್ಲಿದೆ ಮಾಹಿತಿ.

ಒಂದು ವರ್ಷದ ಒಳಗೆ: ಮೊದಲ ಮಗುವಿಗೆ ಹಾಗೂ ಎರಡನೇ ಮಗುವಿಗೆ 12-18 ತಿಂಗಳು ಅಂತರ ಇದ್ದರೆ ಎರಡೂ ಮಕ್ಕಳ ಸಂಬಂಧ ಉತ್ತಮವಾಗಿರುತ್ತದೆ. ಎರಡು ಮಕ್ಕಳು ಅವಳಿಗಳಂತೆ ಅನ್ಯೋನ್ಯವಾಗಿ ಬೆಳೆಯುತ್ತಾರೆ.

ತಾಯಿಗೆ ಆಗುವ ಸಮಸ್ಯೆಗಳೇನು?: ಒಂದು ವರ್ಷದ ಒಳಗೆ ಮತ್ತೊಂದು ಮಗು ಪಡೆದರೆ ತಾಯಿ ಸಮಸ್ಯೆ ಎದುರಿಸುತ್ತಾಳೆ.

ಒಂದನೇ ಮಗು ಜನಿಸಿದ ನಂತರ ಆಕೆಗೆ ಚೇತರಿಸಿಕೊಳ್ಳಲು ಸ್ವಲ್ಪ ಸಮಯಾವಕಾಶ ಬೇಕು. ಹೀಗಾಗಿ ತಾಯಿ ಆರೋಗ್ಯ ದೃಷ್ಟಿಯಿಂದ ಮೊದಲ ಮಗು ಹುಟ್ಟಿ ಮತ್ತೊಂದು ವರ್ಷಕ್ಕೆ ಎರಡನೇ ಮಗು ಮಾಡಿಕೊಳ್ಳುವುದು ಒಳ್ಳೆಯದಲ್ಲ.

ಮಗುವಿಗೂ ತೊಂದರೆ: ಮೊದಲ ಮಗು ಹುಟ್ಟಿ ಮತ್ತೊಂದು ವರ್ಷದೊಳಗೆ ಎರಡನೇ ಮಗು ಮಾಡಿಕೊಳ್ಳಲು ಹೋದರೆ ಹುಟ್ಟುವ ಕಂದಮ್ಮನಿಗೂ ತೊಂದರೆ ಉಂಟಾಗಬಹುದು. ಮಗು ಅವಧಿಗೂ ಮುನ್ನವೇ ಹುಟ್ಟಬಹುದು. ಇಲ್ಲವೇ, ಎರಡನೇ ಮಗುವಿನ ತೂಕ ಕಡಿಮೆ ಇರಬಹುದು.

ಎರಡು ವರ್ಷದ ಅಂತರ: ಮೊದಲ ಮಗುವಿಗೂ ಎರಡನೇ ಮಗುವಿಗೂ ಎರಡು ವರ್ಷ ಅಂತರವಿದ್ದರೆ ಅತ್ಯುತ್ತಮ ಎಂಬುದು ವೈದ್ಯರ ಸಲಹೆ. ಮೊದಲ ಮಗು ದೊಡ್ಡದಾಗಿರುತ್ತದೆ. ಅಲ್ಲದೆ, ತಾಯಿ ಕೂಡ ಚೇತರಿಸಿಕೊಂಡಿರುತ್ತಾಳೆ. ಹೀಗಾಗಿ, ಎರಡು ವರ್ಷ ಅಂತರ ಇಟ್ಟುಕೊಳ್ಳುವುದು ಬೆಸ್ಟ್.

ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆ: ವಿಶ್ವ ಆರೋಗ್ಯ ಸೂಚನೆ ಅಥವಾ ಡಬ್ಲ್ಯುಎಚ್ ಒ ಕೂಡ ಇದೇ ಮಾದರಿಯ ಸೂಚನೆಯನ್ನು ನೀಡುತ್ತದೆ. ಮೊದಲ ಮಗುವಿಗೂ ಎರಡನೇ ಮಗುವಿಗೂ 2 ವರ್ಷ ಅಂತರ ಇರಲಿ ಎನ್ನುತ್ತದೆ.

ಮೂರು ವರ್ಷದ ಅಂತರ: ಮೊದಲ ಮಗುವಿಗೂ ಎರಡನೇ ಮಗುವಿಗೂ ಮೂರು ವರ್ಷ ಅಂತರವಿದ್ದರೆ ಮಕ್ಕಳ ನಡುವಣ ಸಂಬಂಧದಲ್ಲಿ ತೊಡಕುಂಟಾಗಬಹುದು. ನೀವು ಆರಂಭದಲ್ಲಿ ಮೂರು ವರ್ಷ ಮೊದಲ ಮಗುವಿನ ಮೇಲೆ ಗಮನ ಹರಿಸಿರುತ್ತೀರಿ. ನಂತರ ಎರಡನೇ ಮಗುವಿನ ಮೇಲೆ ನಿಮ್ಮ ಗಮನ ಹರಿಯುತ್ತೆ. ಇದು ಮೊದಲ ಮಗುವಿನ ಅಸಮಾಧಾನಕ್ಕೆ ಕಾರಣವಾಗಬಹುದು.

ನಾಲ್ಕು ಅಥವಾ ನಾಲ್ಕಕ್ಕಿಂತ ಹೆಚ್ಚು: ನಿತ್ಯವೂ ಮನುಷ್ಯನ ಬುದ್ಧಿ ವಿಕಸನ ಕಾಣುತ್ತಲೇ ಇರುತ್ತದೆ. ಹೀಗಾಗಿ, ಮೊದಲ ಹಾಗೂ ಎರಡನೇ ಮಗುವಿನ ವಯಸ್ಸಿನ ಅಂತರ ನಾಲ್ಕು ಅಥವಾ ನಾಲ್ಕಕ್ಕಿಂತ ಹೆಚ್ಚಿರಬಾರದು. ಹೀಗಾದರೆ, ಹೊಂದಾಣಿಕೆ ಕಷ್ಟವಾಗುತ್ತದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು