ನವದೆಹಲಿ(25-02-2021):ಇತ್ತೀಚಿನ ಬೆಳವಣಿಗೆಯೊಂದರಲ್ಲಿ, ‘ಗೋಡ್ಸೆ ಭಕ್ತ’ ಬಾಬುಲಾಲ್ ಚೌರಾಸಿಯಾ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಅವರನ್ನು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರು ಪಕ್ಷಕ್ಕೆ ಸ್ವಾಗತಿಸಿದ್ದಾರೆ.
ಗೋಡ್ಸೆ ಬಗ್ಗೆ ಬಿಜೆಪಿಯ ಸಾಧ್ವಿ ಪ್ರಜ್ಞಾ ನಿಲುವಿನ ಬಗ್ಗೆ ಕಾಂಗ್ರೆಸ್ ಈ ಮೊದಲು ವಾಗ್ದಾಳಿ ನಡೆಸಿತ್ತು. ಈಗ ಚೌರೇಶಿಯಾ ಅವರನ್ನು ಸೇರಿಸಿಕೊಳ್ಳುವಲ್ಲಿ ಪಕ್ಷಕ್ಕೆ ಯಾವುದೇ ತೊಂದರೆ ಇಲ್ಲ ಎನ್ನುವ ಟೀಕೆ ಭುಗಿಲೆದ್ದಿದೆ.
2019 ರಲ್ಲಿ ಹಿಂದೂ ಮಹಾಸಭಾ ಗ್ವಾಲಿಯರ್ನಲ್ಲಿ ಗೋಡ್ಸೆಯ 70 ನೇ ತ್ಯಾಗ ದಿನವನ್ನು ಆಚರಿಸಿದೆ. ಬಳಿಕ ಬಲಪಂಥೀಯ ಸಂಘಟನೆಯು 2017 ರಲ್ಲಿ ಜಿಲ್ಲಾಡಳಿತ ವಶಪಡಿಸಿಕೊಂಡ ಗೋಡ್ಸೆ ವಿಗ್ರಹವನ್ನು ಹಿಂದಿರುಗಿಸುವಂತೆ ಕೋರಿ ಜಿಲ್ಲಾಡಳಿತಕ್ಕೆ ಜ್ಞಾಪಕ ಪತ್ರವನ್ನು ಸಲ್ಲಿಸಿದೆ. ಗೋಡ್ಸೆಯ ಕೊನೆಯ ಸಂದೇಶವನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸಬೇಕೆಂದು ಒತ್ತಾಯಿಸಿದೆ. ಚೌರಾಸಿಯಾ ಈ ಎಲ್ಲಾ ವಿಚಾರಗಳಲ್ಲಿ ಮುಂದಾಳತ್ವವನ್ನು ವಹಿಸಿದ್ದರು.