ನವದೆಹಲಿ(27-02-2021): ಕೃಷಿ ಕಾನೂನುಗಳನ್ನು ಮೂರು ವರ್ಷಗಳ ಅವಧಿಗೆ ಅಮಾನತುಗೊಳಿಸುವ ಮೂಲಕ ರೈತರ ಪ್ರತಿಭಟನೆಯ ಪರಿಸ್ಥಿತಿಯನ್ನು ಪರಿಹರಿಸುವಂತೆ ಯೋಗ ಗುರು ಬಾಬಾ ರಾಮದೇವ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ರೈತರು ಮತ್ತು ಕೇಂದ್ರದ ನಡುವೆ ಶಾಂತಿ ಇರಲಿ ಎಂದು ಹಾರೈಸುತ್ತೇನೆ ಎಂದು ಬಾಬ ರಾಮದೇವ್ ಹರಿಯಾಣದ ಸಮಲ್ಖಾದಲ್ಲಿ ಉದ್ಯಮಿಯೊಬ್ಬರ ವಿವಾಹ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ನಾನು ಸರ್ಕಾರದ ವಕ್ತಾರನಾಗಲು ಅಥವಾ ಕೃಷಿಕನಾಗಲು ಬಯಸುವುದಿಲ್ಲ. ಆದರೆ ಈ ಪ್ರಕರಣದಲ್ಲಿ ಸುಧಾರಣೆ ಕಾಣಬೇಕೆಂದು ಬಯಸುತ್ತೇನೆ. ಹೊಸ ಕೃಷಿ ಕಾನೂನುಗಳನ್ನು ಮೂರು ವರ್ಷಗಳವರೆಗೆ ಮುಂದೂಡಬೇಕು ಮತ್ತು ರೈತರು ಸರ್ಕಾರದೊಂದಿಗೆ ಕುಳಿತು ರೈತರು ಮತ್ತು ದೇಶದ ಹಿತಾಸಕ್ತಿ ನೀತಿಗಳ ಬಗ್ಗೆ ಚರ್ಚಿಸಬೇಕು ಎಂದು ರಾಮದೇವ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.