ಮುಂಬೈ(11-11-2020): 2019-20ರಲ್ಲಿ ವಿಪ್ರೊ ಕಂಪನಿಯ ಅಜೀಮ್ ಪ್ರೇಮ್ಜಿ ಬರೊಬ್ಬರಿ 7,904ಕೋಟಿ ರೂ.ದಾನ ಮಾಡಿ ಭಾರತದಲ್ಲಿ ಅತಿ ಹೆಚ್ಚು ದಾನ ಮಾಡಿದ ಉದ್ಯಮಿ ಎಂಬ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹುರುನ್ ಇಂಡಿಯಾ ಮತ್ತು ಎಡೆಲ್ಗಿವ್ ಫೌಂಡೇಷನ್ ವರದಿ ಪ್ರಕಾರ, ಅಜೀಮ್ ಪ್ರೇಮ್ಜಿ ದಿನಕ್ಕೆ 22 ಕೋಟಿ ರೂ.ನಂತೆ 7,904 ಕೋಟಿ ರೂ. ದಾನ ನೀಡಿದ್ದಾರೆ.
ಕೋವಿಡ್ ಫಂಡ್ ಗೆ ಪ್ರೇಮ್ ಜೀ ಅವರು 1,125 ಕೋಟಿ ರೂ. ದಾನ ಮಾಡಿದ್ದಾರೆ. ಟಾಟಾ ಸನ್ಸ್ 1,500 ಕೋಟಿ ರೂ. ದಾನ ಮಾಡಿದೆ. ಅಂಬಾನಿ 510 ಕೋಟಿ ಕೊರೊನಾ ಫಂಡ್ ಗೆ ದಾನ ನೀಡಿದ್ದಾರೆ.
ಎಚ್ಸಿಎಲ್ ಟೆಕ್ನಾಲಜೀಸ್ನ ಸ್ಥಾಪಕ ಶಿವ ನಾಡರ್ 2018-19ರಲ್ಲಿ ಅತಿ ಹೆಚ್ಚು ದಾನ ಮಾಡಿದ್ದರು. ಈ ಬಾರಿ ಅಜೀಂ ಪ್ರೇಮ್ ಜಿ ಅತಿ ಹೆಚ್ಚು ದಾನ ಮಾಡುವ ಮೂಲಕ ಪ್ರಥಮ ಸ್ಥಾನದಲ್ಲಿದ್ದಾರೆ.