ನವದೆಹಲಿ (21-11-2020): ಆಯುರ್ವೇದದಲ್ಲಿ ಸ್ನಾತಕೋತ್ತರ ಮಾಡಿದವರು ನೇತ್ರಶಾಸ್ತ್ರ, ದಂತ ಶಾಸ್ತ್ರ, ಅರ್ಥೋಪೆಡಿಕ್ ಮೊದಲಾದ ಸಾಮಾನ್ಯ ಶಸ್ತ್ರಚಿಕಿತ್ಸೆಗಳ ನಡೆಸಲು ಕೇಂದ್ರ ಸರಕಾರವು ಅನುಮತಿ ನೀಡಿದೆ.
ಶಸ್ತ್ರಚಿಕಿತ್ಸೆಯ ತರಬೇತಿಯನ್ನು ಆಯುರ್ವೇದದ ಸಿಲೆಬಸಿನಲ್ಲಿ ಸೇರಿಸಲಾಗುವುದೆಂದೂ ಕೇಂದ್ರ ಹೊರಡಿಸಿದ ಗಜೆಟ್ ಅಧಿಸೂಚನೆಯಲ್ಲಿ ಹೇಳಲಾಗಿದೆ. ಇದರಲ್ಲಿ ಎಂಎಸ್ (ಆಯುರ್ವೇದ) ಶಲ್ಯಾತಂತ್ರ ಮತ್ತು ಎಂಎಸ್ (ಆಯುರ್ವೇದ) ಶಲಕ್ಯ ತಂತ್ರ ಎಂಬ ಎರಡು ಬಿರುದುಗಳನ್ನು ನೀಡಲಾಗುವುದು. ಶಲ್ಯಾ ತಂತ್ರವು ಜನರಲ್ ಸರ್ಜರಿಗೆ ಸಂಬಂಧಿಸಿದ್ದರೆ, ಶಲಕ್ಯವು ಕಣ್ಣು, ಕಿವಿ, ಮೂಗು, ಗಂಟಲು, ತಲೆ ಮತ್ತು ದಂತಗಳಿಗೆ ಸಂಬಂಧಿಸಿದ್ದಾಗಿದೆ.
ಅದೇ ವೇಳೆ ಸ್ನಾತಕೋತ್ತರ ಆಯುರ್ವೇದ ಶಿಕ್ಷಣ 2016ರ ನಿಯಮಾವಳಿಯನ್ನು ‘ಭಾರತೀಯ ವೈದ್ಯಕೀಯ ಕೇಂದ್ರ ಮಂಡಳಿ ತಿದ್ದುಪಡಿ ನಿಯಮಗಳು 2020’ ಎಂದು ಮರುನಾಮಕರಣ ಮಾಡಲಾಯಿತು.