ಅಯೋಧ್ಯೆಯಲ್ಲಿ ಮಸೀದಿಗೆ ಹೋಗುತ್ತಿದ್ದರು. ಇದು ನಾಲ್ಕು ಶತಮಾನಗಳಿಗಿಂತಲೂ ಹಳೆಯದು. 1949 ರಲ್ಲಿ, ಕೆಲವು ಹಿಂದೂ ದೇವತೆಗಳ ವಿಗ್ರಹಗಳನ್ನು ಜಾಣತನದಿಂದ ಮಸೀದಿಯೊಳಗೆ ಮುಖ್ಯ ಗುಮ್ಮಟದ ಮಧ್ಯದಲ್ಲಿ ಇರಿಸಲಾಯಿತು.
ಡಿಸೆಂಬರ್ 6, 1992 ರಂದು ಮಸೀದಿಯನ್ನು ಧ್ವಂಸ ಮಾಡಲಾಯಿತು.ಇದರ ಬೆನ್ನಲ್ಲೇ ಮಸೀದಿ ಹೇಗೆ ಮತ್ತು ಏಕೆ ಕುಸಿದಿದೆ ಎಂದು ವಿಚಾರಿಸಲು ಆಯೋಗವನ್ನು ರಚಿಸಲಾಯಿತು.
ಲಿಬರ್ಹಾನ್ ಆಯೋಗವು ಮಸೀದಿಯನ್ನು ಮನುಷ್ಯರಿಂದ ಕೆಡವಲಾಯಿತು ಮತ್ತು ಉರುಳಿಸುವಿಕೆಯನ್ನು “ಪೂರ್ವನಿಯೋಜಿತ ಕೃತ್ಯ” ಎಂದು ಹೇಳುವುದು ಸೂಕ್ತವೆಂದು ತಿಳಿಸಿದೆ. ಧ್ವಂಸದ ಬಗ್ಗೆ “ಜವಾಬ್ದಾರಿ” ಇವರೆಂದು ಕೂಡ ಒಬ್ಬ ಮನುಷ್ಯನನ್ನು ಆಯೋಗವು ಹೆಸರಿಸಿದೆ. ಸುದೀರ್ಘ ಕಾಲದ ಕಾನೂನು ಹೋರಾಟ ನಡೆದಿದೆ. ಆದರೆ ಕೊನೆಗೆ ಸಾಕ್ಷಿ ನಿಷ್ಕ್ರಿಯವಾಗಿದೆ.
ಈ ಎಲ್ಲಾ ಬೆಳವಣಿಗೆಗಳ ಕೊನೆಗೆ 28 ವರ್ಷಗಳ ಮಸೀದಿ ಧ್ವಂಸ ಪ್ರಕರಣದಲ್ಲಿನ 32 ಆರೋಪಿಗಳನ್ನು ನಿರ್ದೋಶಿ ಎಂದೂ, ಇದೊಂದು ಪೂರ್ವ ನಿಯೋಜಿತ ಕೃತ್ಯವಲ್ಲೆಂದು ಸಿಬಿಐ ವಿಶೇಷ ನ್ಯಾಯಾಲಯ ಹೇಳಿದೆ. ಮಸೀದಿ ಧ್ವಂಸ ಪ್ರಕರಣದಲ್ಲಿ ಭಾಗಿಯಾಗಿದ್ದರೆನ್ನಲಾದ ಎಲ್ಲಾ ಆರೋಪಿಗಳು ರಿಲೀಫ್ ಆಗಿದ್ದಾರೆ.
ಇನ್ನೊಂದು ಕಡೆ 19 ವರ್ಷದ ವಾಲ್ಮೀಕಿ ಜನಾಂಗದ ಮಹಿಳೆ ಜಮೀನಿನ ಕೆಲಸಕ್ಕಾಗಿ ಹೊಲಕ್ಕೆ ತೆರಳಿದ್ದಾಳೆ. ಮೇಲ್ಜಾತಿಯ ಠಾಕೂರು ಜನಾಂಗದ ಯುವಕರ ತಂಡ ಅವಳನ್ನು ಬೇಕಾದ ರೀತಿ ಅನುಭವಿಸಿ, ನಾಲಗೆ ಕತ್ತರಿಸಿ, ಹಿಂಸಿಸಿ, ಅತ್ಯಾಚಾರ ನಡೆಸಿ ನಡುರಸ್ತೆಯಲ್ಲಿ ಎಸೆದಿದ್ದಾರೆ. ಪೊಲೀಸರು ಸಂತ್ರಸ್ತೆಯ ಮೃತದೇಹವನ್ನು ಕುಟುಂಬಸ್ಥರಿಗೂ ತೋರಿಸದೆ ಮಧ್ಯರಾತ್ರಿ ಅಂತ್ಯ ಸಂಸ್ಕಾರ ನಡೆಸಿದ್ದಾರೆ. ಜನ ಬೀದಿಗಿಳಿದಿದ್ದಾರೆ. ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಬಹಿರ್ದೆಸೆಗೆ ತೆರಳಿದ ಕಾರಣಕ್ಕೆ ಕೆಳವರ್ಗದ ಮಕ್ಕಳನ್ನು ಹತ್ಯೆ ಮಾಡಲಾಗುತ್ತಿದೆ. ಆದರೆ ಯೋಗಿ ಆದಿತ್ಯನಾಥ್ ಇನ್ನು ಭಾರತಕ್ಕೆ ಗುಜರಾತ್ ಮಾದರಿಯಲ್ಲ. ಉತ್ತರ ಪ್ರದೇಶ ಮಾದರಿಯ ಆತ್ಮನಿರ್ಭರ ಭಾರತ ಎಂದು ಹೇಳುತ್ತಿದ್ದಾರೆ. ಒಂದು ವೇಳೆ ಉತ್ತರ ಪ್ರದೇಶದ ಇಂತದ್ದೇ ಆತ್ಮ ನಿರ್ಭರ ಭಾರತ ಇಡೀ ಭಾರತಕ್ಕೆ ವ್ಯಾಪಿಸಿದರೆ ಸಾಮಾನ್ಯರ ಪಾಡು ಹೇಳತೀರದು.
ಅಯೋಧ್ಯೆ ಮತ್ತು ಹತ್ರಾಸ್ ಈ ಎರಡು ಘಟನೆಗಳು ನಡೆದಿರುವುದು ಉತ್ತಪ್ರದೇಶದಲ್ಲಿ. ಇವುಗಳು ಗಣರಾಜ್ಯ ಭಾರತಕ್ಕೆ ಅಪಾಯ ಎನ್ನುವುದನ್ನು ಸಾರುತ್ತಿದೆ.ಅಂತಹ ವ್ಯವಸ್ಥೆಯು ಹಾನಿಕಾರಕ ಸಾಮಾಜಿಕ ಅಸಂಗತತೆಯನ್ನು ಹುಟ್ಟುಹಾಕುತ್ತದೆ.
ಇಂದಿನ ಹೊಸ ನ್ಯಾಯಶಾಸ್ತ್ರವನ್ನು ಬುದ್ಧಿವಂತಿಕೆಯಿಂದ ನೋಡಿದ್ರೆ , ನಮ್ಮ ಪ್ರಾಚೀನ ಬುದ್ಧಿವಂತಿಕೆಗಳಿಗೆ ಅನುಗುಣವಾಗಿ, ಕೆಲವು ಭಾರತೀಯರು ಯಾವಾಗಲೂ ತಪ್ಪಿತಸ್ಥರು ಮತ್ತು ಕೆಲವರು ಎಂದಿಗೂ ತಪ್ಪಿತಸ್ತರಲ್ಲ. ಇದು ಈಶಾನ್ಯ ದೆಹಲಿ ಗಲಭೆಗಳಿಂದ ತೀರಾ ಸ್ಪಷ್ಟವಾಗಿ ಕೂಡ ತಿಳಿದು ಬಂದಿತ್ತು. ಮನುಸ್ಮೃತಿಯಲ್ಲಿ ಪ್ರತಿಪಾದಿಸಲಾಗಿರುವಂತಹ ಆಧ್ಯಾತ್ಮಿಕ ರೀತಿಯ ಪೂರ್ವಭಾವಿ ದೃಷ್ಟಿಕೋನಗಳಲ್ಲಿ ಬೇರೂರಿರುವ ಸರಳೀಕೃತ ವ್ಯವಸ್ಥೆಯು ಭಾರತದ ಸಾಮಾಜಿಕ ಮತ್ತು ಕಾನೂನು ತಲೆನೋವುಗಳಿಗೆ ಉತ್ತರವಾಗಿರಬಹುದು.