ಅಟೋ ರಿಕ್ಷಾ ಚಾಲಕ ಯಾ ಪ್ರಯಾಣಿಕರ ಪಾಲಿಗೊಂದು ಶುಭ ಸುದ್ದಿ | ಕೋವಿಡ್ ಸಮಯದಲ್ಲಿ ಅಟೋ ರಿಕ್ಷಾನೇ ಹೆಚ್ಚು ಸುರಕ್ಷಿತವೆಂದು ಅಧ್ಯಯನ ವರದಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ಕೋವಿಡ್ ಕಾರಣದಿಂದಾಗಿ ಅತಿ ಹೆಚ್ಚು ನಷ್ಟಕ್ಕೊಳಗಾದ ಕ್ಷೇತ್ರಗಳಲ್ಲಿ ಸಾರಿಗೆಸಂಪರ್ಕವೂ ಒಂದು. ಕಾರು, ಬಸ್ಸು, ರಿಕ್ಷಾ ಮುಂತಾದ ವಾಹನಗಳಿಂದಲೇ ಜೀವನೋಪಾಯ ಮಾಡುತ್ತಿರುವವರಿಗೆ ಇದು ಮರ್ಮಾಘಾತ ನೀಡಿರುವುದು ಸುಳ್ಳಲ್ಲ. ಇದೀಗ ಅಟೋ ರಿಕ್ಷಾ ಚಾಲಕ ಮತ್ತು ಪ್ರಯಾಣಿಕರ ಪಾಲಿಗೆ ಶುಭ ಸುದ್ದಿಯೊಂದು ಬಂದಿದೆ.

ಹೌದು.. ಕೋವಿಡ್ ಕಾಲದಲ್ಲಿ ಅಟೋ ರಿಕ್ಷಾ ಪ್ರಯಾಣವೇ ಅತ್ಯಂತ ಸುರಕ್ಷಿತ ಪ್ರಯಾಣ ಎಂಬುದನ್ನು ಅಧ್ಯಯನವು ತೋರಿಸಿಕೊಟ್ಟಿದೆ. ಅಮೇರಿಕಾದ ಮೇರಿಲ್ಯಾಂಡ್ ನಲ್ಲಿರುವ ಜೋನ್ಸ್ ಹೋಪ್ಕಿನ್ಸ್ ವಿಶ್ವವಿದ್ಯಾಲಯ (ಜೆಎಚ್‍ಯು) ದ ಅಧ್ಯಯನ ವರದಿಯಲ್ಲಿ ಅಂಶವು ಬೆಳಕಿಗೆ ಬಂದಿದೆ.

ಎಸಿ (ಹವಾ ನಿಯಂತ್ರಕ) ಹಾಕಿ ಮುಚ್ಚಿದ ಕಾರಿನಲ್ಲಿ ಪ್ರಯಾಣಿಸುವಾಗ ಕೋವಿಡ್ ಹರಡುವ ಸಾಧ್ಯತೆಯು ಹೆಚ್ಚಾಗಿದೆ. ಇದು ಅಟೋ ರಿಕ್ಷಾದಲ್ಲಿ ಪ್ರಯಾಣಿಸುವಾಗ ಕೋವಿಡ್ ಹರಡುವ ಸಾಧ್ಯತೆಗಿಂತಲೂ 300 ಪಟ್ಟು ಹೆಚ್ಚು ಎಂದು ತಿಳಿದುಬಂದಿದೆ. ಅದೇ ರೀತಿ ಎಸಿ ಬಳಸುತ್ತಾ ಮಾಡುವ ಯಾವುದೇ ವಾಹನ ಪ್ರಯಾಣಕ್ಕಿಂತಲೂ, ಎಸಿ ಬಳಸದೇ, ಕಿಟಕಿಗಳನ್ನು ತೆರೆದು ಮಾಡುವ ವಾಹನ ಪ್ರಯಾಣದಲ್ಲಿ ಕೋವಿಡ್ ತಗಲುವ ಸಾಧ್ಯತೆ 250 ಶೇಕಡಾಕ್ಕಿಂತಲೂ ಕಡಿಮೆ ಎನ್ನಲಾಗಿದೆ.

ಜೊತೆಗೆ ವಾಹನದ ವೇಗವನ್ನು ಹೆಚ್ಚಿಸಿದಂತೆ, ಕೋವಿಡ್ ತಗಲುವ ಸಾಧ್ಯತೆಯೂ ಕಡಿಮೆಯಾಗುತ್ತಿರುವುದು ತಿಳಿದು ಬಂದಿದೆ. ವೇಗವನ್ನು ಹೆಚ್ಚಿಸಿದರೆ ಕೋವಿಡ್ ತಗಲುವ ಸಾಧ್ಯತೆ ಸುಮಾರು ಎಪ್ಪತ್ತು ಶೇಕಡಾಕ್ಕಿಂತಲೂ ಕಡಿಮೆಯಾಗುವ ಸಾಧ್ಯತೆಯಿದೆಯೆಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

ಜೆಎಚ್‍ಯು ಸೇರಿದಂತೆ ವಿವಿಧ ಸಂಸ್ಥೆಗಳ ತಜ್ಞರು ಭಾರತದಲ್ಲಿ ಅಟೋ ರಿಕ್ಷಾ, ಎಸಿ ವ್ಯವಸ್ಥೆ ಹೊಂದಿರುವ ಕಾರು, ಎಸಿ ಇಲ್ಲದ ಕಾರು ಹಾಗೂ ಬಸ್ಸುಗಳಲ್ಲಿ ಪ್ರಯಾಣಿಸಿ, ಅಧ್ಯಯನವನ್ನು ನಡೆಸಿದ್ದಾರೆ. “ಕೋವಿಡ್ 19 ಕಾಲದಲ್ಲಿ ಭಾರತದ ವಿವಿಧ ರಸ್ತೆ ಸಾರಿಗೆ ವಾಹನಗಳಲ್ಲಿರುವ ಅಪಾಯ ಸಾಧ್ಯತೆಗಳ ಬಗೆಗಿನ ವಿಶ್ಲೇಷಣೆಎಂಬ ಅಧ್ಯಯನ ವರದಿಯಲ್ಲಿ ಎಲ್ಲಾ ವಿಚಾರಗಳು ಅಡಕವಾಗಿದ್ದು, ಇದನ್ನು ಜರ್ನಲ್ ಆಫ್ ಎನ್ವಿರಾನ್‍ಮೆಂಟಲ್ ರಿಸರ್ಚ್ ಪ್ರಕಟಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು