ಬೈಲ್ ಬ್ರದರ್ಸ್ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ (ರಿ) ಕೆದಂಬಾಡಿ ಇದರ ವಾರ್ಷಿಕ ಮಹಾಸಭೆ ಹಾಗೂ ನೂತನ ಸಮಿತಿ ರಚನೆ | ಸಮಿತಿಯ ಅಧ್ಯಕ್ಷರಾಗಿ ಹಾರಿಸ್ ಕೆದಂಬಾಡಿ, ಪ್ರ.ಕಾರ್ಯದರ್ಶಿಯಾಗಿ ಇಮ್ತಿಯಾಝ್ ಕೆದಂಬಾಡಿ, ಕೋಶಾಧಿಕಾರಿಯಾಗಿ ಸಾದಿಕ್ ಖತರ್ ಆಯ್ಕೆ

ಮಂಜೇಶ್ವರ: ಇಲ್ಲಿನ ಪ್ರತಿಷ್ಠಿತ ಬೈಲ್ ಬ್ರದರ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ (ರಿ) ಕೆದಂಬಾಡಿ ಇದರ ವಾರ್ಷಿಕ ಮಹಾಸಭೆಹಾಗೂ ನೂತನ ಸಮಿತಿ ರಚನೆ ಕಾರ್ಯಕ್ರಮವು ಬೈಲ್ ಬ್ರದರ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು. ಹಾರಿಸ್ ಕೆದುಂಬಾಡಿ ಅವರು ನೆರೆದವರನ್ನು ಸ್ವಾಗತಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸಿದ್ದೀಕ್ ಖತರ್ ಅವರು ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆಯನ್ನು ನೆರವೇರಿಸಿದರು. ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಖಲೀಲ್ RST, ಅಧ್ಯಕ್ಷರಾಗಿ ಹಾರಿಸ್ ಕೆದಂಬಾಡಿ, ಉಪಾಧ್ಯಕ್ಷರಾಗಿ ಅನ್ಸಾರ್ ಖತರ್, ಪ್ರಧಾನ ಕಾರ್ಯದರ್ಶಿಯಾಗಿ ಇಮ್ತಿಯಾಝ್ ಕೆದಂಬಾಡಿ ಗುಜರಾತ್, ಕಾರ್ಯದರ್ಶಿಯಾಗಿ … Read more

HTFC ವಾರ್ಷಿಕೋತ್ಸವ,* *3ನೇ‌ಬಾರಿ ಅಧ್ಯಕ್ಷರಾಗಿ ಸಮೀರ್ K S , ಕಾರ್ಯದರ್ಶಿಯಾಗಿ ಸಮೀರ್ M G ಆಯ್ಕೆ*

ವಿಟ್ಲ : ಇಲ್ಲಿಗೆ ಸಮೀಪದ ಟಿಪ್ಪು ನಗರದಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ರಂಗದಲ್ಲಿ ಮಿಂಚಿನ ಜನಸೇವೆಯ ಮೂಲಕ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘಟಿಸಿ ಊರಪರವೂರ ಪ್ರಶಂಸೆಗೆ ಪಾತ್ರವಾಗಿರುವ ಹೆಮ್ಮೆಯ ಸಂಘಟನೆಯಾಗಿದೆ. *ಹಝ್ರತ್ ಟಿಪ್ಪು ಸುಲ್ತಾನ್ ಪ್ರೆಂಡ್ಸ್ ಕಮಿಟಿ* (ರಿ) HTFC – ಟಿಪ್ಪು ನಗರ – ವಿಟ್ಲ, ಊರಿನ ಬಡ ಹೆಣ್ಣು ಮಕ್ಕಳ ವಿವಾಹಕ್ಕೆ ಧನ ಸಹಾಯದಲ್ಲಿ ನೆರವಾಗುವುದು ಮತ್ತು ರೋಗಿಗಳ ಚಿಕಿತ್ಸೆಯ ವೆಚ್ಚ ಭರಿಸಲು ನೆರವಾಗುವುದು ಈ ಸಮಿತಿಯ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ. ಒಟ್ಟಿನಲ್ಲಿ ಈ … Read more

ಸಿಎಂ ಬದಲಾವಣೆಗಾಗಿ ದೊಡ್ಡ ಸಂಧಾನ ಮಾಡುತ್ತಿದ್ದಾರೆ ನನಗೂ ಆಮಿಷ ಒಡ್ಡಿದ್ದಾರೆ :ಯತ್ನಾಳ್

ಸುವರ್ಣಸೌಧ (ಬೆಳಗಾವಿ): ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಗಾಗಿ ದೊಡ್ಡ ದೊಡ್ಡ ಸಂಧಾನ ಮಾಡುತ್ತಿದ್ದಾರೆ ನಿಜ. ಆದರೆ ಇಂತವರನ್ನು ಒಪ್ಪುವ ಕೀಳುಮಟ್ಟದ ರಾಜಕಾರಣಿ ನಾನಲ್ಲ. ಇಂತಹ ಆಯೋಗ್ಯನ ಜೊತೆ ನಾನು ಸೇರುವುದಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪರೋಕ್ಷವಾಗಿ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟವರಿಗೆ ತಿರುಗೇಟು ನೀಡಿದರು. ಬುಧವಾರ ಸಚಿವ ಈಶ್ವರಪ್ಪ, ಯತ್ನಾಳ್, ಮುರುಗೇಶ್ ನಿರಾಣಿ‌ ಸಭೆ ನಡೆಸಿದ್ದರು. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, “ಮುಖ್ಯಮಂತ್ರಿ ಆಗುತ್ತೇನೆಂದು ಯಾರ್ಯಾರೋ‌ ಹಗಲು ಕನಸು ಕಾಣುತ್ತಿದ್ದಾರೆ. ಸೂಟು … Read more

ಅಯೋಧ್ಯೆಯಲ್ಲಿ ರಾಮಮಂದಿರ ಭೂಮಿ ಖರೀದಿಗೆ ಪ್ರಭಾವಿಗಳ ಪೈಪೋಟಿ

ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ಭೂಮಿ ಖರೀಸುವುದು ಪ್ರತಿಯೊಬ್ಬರ ಕನಸು. ಪುಣ್ಯಭೂಮಿಯಲ್ಲಿ ನಮ್ಮದೊಂದು ಪಾಲಿರಲಿ ಅನ್ನೋ ಮಂದಿ, ರಾಮಮಂದಿರದ ತೀರ್ಪು ಬಂದ್ಮೇಲೆ ಅಯೋಧ್ಯೆಯತ್ತ ಗಮನ ಹರಿಸಿದ್ದಾರೆ. ರಾಮಮಂದಿರದ ಸುತ್ತಮುತ್ತ 70ಕಿ.ಮೀ. ಆವರಣ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಪಾಲಾಗಿದೆ. ಇನ್ನುಳಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ, ಸಾರ್ವಜನಿಕರು ಭೂಮಿ ಖರೀದಿಸಬಹುದು ಎಂಬ ನಿರ್ಧಾರ ಮಾಡಲಾಗಿದೆ. ಆದ್ರೆ ಇಲ್ಲಿ ನಿಜವಾಗಲು ಸಾಮಾನ್ಯ ಜನರಿಗೆ ಭೂಮಿ ಖರೀದಿಸಲು ಸಾಧ್ಯವಿದೆಯ ಎಂಬ ಪ್ರಶ್ನೆ ಕಾಡೋಕೆ ಶುರುವಾಗಿದೆ. ಈ ಬಗ್ಗೆ ʼಇಂಡಿಯನ್ ಎಕ್ಸ್ ಪ್ರೆಸ್ʼ ತನಿಖಾ … Read more

ಏಷ್ಯನ್ ಚಾಂಪಿಯನ್ ಹಾಕಿ ಟ್ರೋಫಿ: ಪಾಕ್ ಮಣಿಸಿ ಕಂಚು ಗೆದ್ದ ಭಾರತ

ನವದೆಹಲಿ: ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪುರುಷರ ಹಾಕಿ ಟೂರ್ನಮೆಂಟ್‍ನಲ್ಲಿ ಬುಧವಾರ ನಡೆದ ಮೂರನೇ-ನಾಲ್ಕನೇ ಸ್ಥಾನದ ಪ್ಲೇ-ಆಫ್ ಪಂದ್ಯದಲ್ಲಿ ಭಾರತವು ಎದುರಾಳಿ ಪಾಕಿಸ್ತಾನ ತಂಡವನ್ನು ಸೋಲಿಸಿ ಕಂಚಿನ ಪದಕವನ್ನು ಗಳಿಸಿದೆ. ಭಾರತವು 4-3 ರಿಂದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮಣಿಸಿ ಕಂಚಿನ ಪದಕವನ್ನು ಗೆದ್ದುಕೊಂಡಿದೆ

ಒಮೈಕ್ರಾನ್ ಆತಂಕ: ರಾಜಧಾನಿಯಲ್ಲಿ ಕ್ರಿಸ್ಮಸ್‌ ಮತ್ತು ಹೊಸ ವರ್ಷಾಚರಣೆ ನಿಷೇಧ

ಕೊರೊನಾ ವೈರಸ್ ಪ್ರಕರಣಗಳ ಹೆಚ್ಚಳ ಮತ್ತು ಒಮೈಕ್ರಾನ್‌ ರೂಪಾಂತರದ ಆತಂಕದಿಂದಾಗಿ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ)ವು ರಾಜ್ಯದಲ್ಲಿ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಕೂಟ ನಡೆಯದಂತೆ ನೋಡಿಕೊಳ್ಳಲು ಬುಧವಾರ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಜೊತೆಗೆ ಕ್ರಿಸ್‌ಮಸ್ ಮತ್ತು ಹೊಸ ವರ್ಷಕ್ಕೆ ಮುಂಚಿತವಾಗಿ ಸಂಭಾವ್ಯ ಕೊರೊನಾ ಸೂಪರ್‌ಸ್ಪ್ರೆಡರ್ ಪ್ರದೇಶಗಳನ್ನು ಗುರುತಿಸಲು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳಿಗೆ (DMs) ಆದೇಶಿಸಿದೆ. ಜನರು ಸಾಮಾಜಿಕ ಅಂತರದ ಮಾನದಂಡಗಳನ್ನು ಅನುಸರಿಸುವುದನ್ನು ಮತ್ತು ಮಾಸ್ಕ್‌ಗಳನ್ನು ಧರಿಸುವ ಬಗ್ಗೆ ಖಚಿತಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಉಪ ಕಮಿಷನರ್‌ಗಳಿಗೆ … Read more

ಉತ್ತರ ಪ್ರದೇಶ: ಲವ್ ಜಿಹಾದ್ ಕಾನೂನಿನಡಿಯಲ್ಲಿ ಯುವಕನಿಗೆ 10 ವರ್ಷ ಜೈಲು ಶಿಕ್ಷೆ ಮತ್ತು ಮೂವತ್ತು ಸಾವಿರ ದಂಡ

ಲಕ್ನೋ:ಉತ್ತರ ಪ್ರದೇಶದ ‘ಲವ್ ಜಿಹಾದ್’ ಕಾನೂನಿನಡಿಯಲ್ಲಿ ಮೊದಲ ಬಾರಿಗೆ, ಕಾನ್ಪುರದ ಯುವಕನಿಗೆ 10 ವರ್ಷಗಳ ಜೈಲು ಶಿಕ್ಷೆ ಮತ್ತು 30,000 ರೂಪಾಯಿ ದಂಡವನ್ನು ವಿಧಿಸಲಾಯಿತು. ಘಟನೆಯು ಮೇ 2017 ರ ಹಿಂದಿನದು.ಜಾವೇದ್ ಎಂಬ ಯುವಕ ತನ್ನನ್ನು ಅಪ್ರಾಪ್ತ ವಯಸ್ಸಿನ ಹುಡುಗಿಗೆ ಮುನ್ನಾ ಎಂದು ಪರಿಚಯಿಸಿಕೊಂಡಿದ್ದಾನೆ ಮತ್ತು ಅವಳನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದಾನೆ.ನಂತರ ದಂಪತಿಗಳು ಮದುವೆಯಾಗಿ ಓಡಿಹೋದರು. ಘಟನೆಯ ಅರಿವು ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮರುದಿನ ಯುವಕನನ್ನು ಬಂಧಿಸಿದ್ದಾರೆ.ತನ್ನ ಗಂಡನ ಮನೆಗೆ ಬಂದಾಗ ಅವನು ತನ್ನ ನಿಜವಾದ … Read more

ಯುಪಿ: ಮತಾಂತರ ಹೆಸರಿನಲ್ಲಿ ಸುಳ್ಳಾರೋಪ

ಉತ್ತರ ಪ್ರದೇಶ ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸಿಂ ರಿಜ್ವಿ ಡಿಸೆಂಬರ್ 6 ರಂದು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ, ರಿಜ್ವಿಯ ಮತಾಂತರದ ನಂತರ ಉತ್ತರ ಪ್ರದೇಶದ 34 ಮುಸ್ಲಿಂ ಕುಟುಂಬಗಳು ಹಿಂದೂ ಧರ್ಮಕ್ಕೆ ಮತಾಂತರಗೊಂಡರು ಎಂಬ ಹೇಳಿಕೆಯೊಂದಿಗೆ ಹಿಂದೂ ಪೂಜಾರಿಯ ಸುತ್ತ ಮುಸ್ಲಿಂ ಜನರು ಸುತ್ತವರೆದಿರುವ ಫೋಟೋವೊಂದನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ. ಫೆಬ್ರವರಿ 2022 ರಲ್ಲಿ ನಡೆಯಲಿರುವ ಯುಪಿ ವಿಧಾನಸಭಾ ಚುನಾವಣೆಗೂ ಮುಂಚಿತವಾಗಿ ಈ ಹೇಳಿಕೆಯೊಂದಿರುವ ಪೋಸ್ಟ್‌ ವೈರಲ್ ಆಗುತ್ತಿದೆ … Read more

ಕಲಾಪದಲ್ಲಿ ಭಾಗಿಯಾಗಿದ್ದ ಸಂಸದನಿಗೆ ಸೋಂಕು ಧೃಡ

ನವದೆಹಲಿ: ಲೋಕಸಭಾ ಕಲಾಪದಲ್ಲಿ ಭಾಗಿಯಾಗಿದ್ದ ಬಿಎಸ್ಪಿ ಸಂಸದ ಡ್ಯಾನಿಶ್ ಅಲಿಗೆ ಕೋರೋಣ ಸೋಂಕು ದೃಡಪಟ್ಟಿದೆ ಎಂದು ಟ್ವೀಟ್ ಮೂಲಕ ಸ್ವತಃ ಅಲಿಯವರೇ ತಿಳಿಸಿದ್ದಾರೆ. ಟ್ವೀಟ್ ಮಾಡಿದ ಅವರು,” ಕೋವಿಡ್ ಲಸಿಕೆಯ 2 ಡೋಸ್ ಪಡೆದೂ ನನಗೆ ಸೋಂಕು ದೃಡಪಟ್ಟಿದೆ. ಸೋಮವಾರ ಕಲಾಪಕ್ಕೆ ಬಂದು ನನ್ನನ್ನು ಭೇಟಿಯಾದವರೆಲ್ಲರೂ ಕೋವಿಡ್ ಪರೀಕ್ಷೆ ನಡೆಸಿ ಎಂದು ತಿಳಿಸಿದ್ದಾರೆ. ಡಿಸೆಂಬರ್ 23ಕ್ಕೆ ಸಂಸತ್ತಿನ ಚಳಿಗಾಲ ಅಧಿವೇಶನ ಅಂತ್ಯವಾಗುತ್ತಿದ್ದು, ಕಲಾಪಕ್ಕೆ ಹಾಜರಾಗಿದ್ದ ಸಂಸದರಿಗೆ ಕೊರೊನಾ ಸೋಂಕು ದೃಢಪಟ್ಟಿರುವುದು ಆತಂಕ ಮೂಡಿಸಿದೆ.

ರಾಜ್ಯದಲ್ಲಿ ಎಮ್ ಇ ಎಸ್ ಸಂಘಟನೆಯನ್ನು ಬ್ಯಾನ್ ಮಾಡಲು ಚಿಂತನೆ : ಗೃಹ ಸಚಿವ ಆರಗ ಜ್ಞಾನೇಂದ್ರ

ರಾಜ್ಯದಲ್ಲಿ ಎಮ್ ಇ ಎಸ್ (ಮಹಾರಷ್ಟ್ರ ಏಕೀಕರಣ ಸಮಿತಿ) ಸಂಘಟನೆಯನ್ನು ನಿಷೇಧಿಸಲು ಚಿಂತನೆ ನಡೆಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಕನ್ನಡ ಧ್ವಜ ಸುಟ್ಟ ಪ್ರಕರಣ, ಕನ್ನಡಿಗರ ಮೇಲಿನ ದೌರ್ಜನ್ಯ ಪ್ರಕರಣ ಮತ್ತು ಸಂಗೊಳ್ಳಿ ರಾಯಣ್ಣರ ಪ್ರತಿಮೆಯನ್ನು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಈ ಕ್ರಮವನ್ನು ಕೈಗೊಳ್ಳಲು ರಾಜ್ಯ ಸರಕಾರ ಚಿಂತನೆ ನಡೆಸುತ್ತಿದೆ. ಆದರೆ ಇನ್ನೊಂದು ಕಡೆ ವಸತಿ ಸಚಿವ ವಿ ಸೋಮಣ್ಣ ” ಎಮ್ ಇ ಎಸ್ ಸಂಘಟನೆಯವರು ನಮ್ಮವರೇ. ನಿಷೇಧಿಸಲು ಯಾವುದೇ ಚಿಂತನೆ … Read more